ರಾಯಚೂರು: ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಕುರುಡಿ ಗ್ರಾಮದಲ್ಲಿ ದೇವಮ್ಮ ಜಾತ್ರೆಯ ಅಂಗವಾಗಿ ಗ್ರಾಮದ ಸರ್ವ ಸಮುದಾಯಗಳೊಂದಿಗೆ ಮತ್ತು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮತ್ತು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಉಪಾಧ್ಯಕ್ಷರು ಅಧ್ಯಕ್ಷರುಗಳ ಸಮ್ಮುಖದಲ್ಲಿ ದ್ಯಾವಮ್ಮ ಜಾತ್ರೆಯ ಅಂಗವಾಗಿ ಜಾತ್ರೆಗೆ ಅನುಕೂಲವಾಗುವಂತೆ ಗ್ರಾಮದಲ್ಲಿ ಪೊಲೀಸ್ ಬಂದಬಸ್ತಾ ಹಾಗೂ ಅಬಕಾರಿ ಅಧಿಕಾರಿಗಳಿಂದ ಯಾವುದೇ ಮಾದಕ ವಸ್ತುಗಳು ಕುರಡಿ ಗ್ರಾಮಕ್ಕೆ ಬಾರದಂತೆ ಅಬಕಾರಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮದ ಸುತ್ತಲೂ ಬೇಲಿ ಮುಳ್ಳು ಏನೂ ಗ್ರಾಮದ ಜನರಿಗೆ ಹನಿಯಗದಂತೆ ಜಾತ್ರೆಗೆ ತಿರುಗಾಡಲು ಅನುಕೂಲ ಮಾಡಿಕೊಡುವಂತೆ ತಿಳಿಸಿದರು
ಮತ್ತು ಕೆಎಸ್ಆರ್ಟಿಸಿ ಬಸ್ ಜಾತ್ರೆಗೆ ಅನುಕೂಲ ಮಾಡಿಕೊಡುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ತಿಳಿಸಿದರು
ಮತ್ತು ಜೆಸ್ಕಾಂ ಅಧಿಕಾರಿಗಳು ಯಾವುದೇ ವಿದ್ಯುತ್ ನಿಂದ ತೊಂದರೆಯಗದಂತೆ ಅನುಕೂಲ ಮಾಡಿಕೊಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮದ ಜನರಿಗೆ ಏನೇ ಸಮಸ್ಯೆಗಳು ಬಂದಲ್ಲಿ ತಾವು ತಕ್ಷಣ ಅದಕ್ಕೆ ಸ್ಪಂದಿಸಬೇಕು ಗ್ರಾಮದಲ್ಲಿ ಯಾರಿಗೆ ಆರೋಗ್ಯದಲ್ಲಿ ಹಾನಿಕರವಾಗದಂತೆ ನೋಡಿಕೊಳ್ಳಬೇಕೆಂದು ವೈದ್ಯಧಿಕಾರಿಗಳಿಗೆ ತಿಳಿಸಿದರು ಮತ್ತು ಗ್ರಾಮದಲ್ಲಿ ಸರ್ವ ಸಮುದಾಯಗಳ ಸಮ್ಮುಖದಲ್ಲಿ ಯಾವುದೇ ಪಕ್ಷಾತೀತವಾಗಿ ಗ್ರಾಮದಲ್ಲಿ ಯಾರು ಒಬ್ಬರಿಗೊಬ್ಬರು ವಿರೋಧವನ್ನು ಕಟ್ಟಿ ಕೊಳ್ಳದೆ ಎಲ್ಲರೂ ಅಣ್ಣತಮ್ಮರಂತೆ ನಡೆದುಕೊಂಡು ಗ್ರಾಮ ದೇವತೆಯ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಸಭೆಯಲ್ಲಿ ಗ್ರಾಮಸ್ಥರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಪೊಲೀಸ್ ಅಧಿಕಾರಿಗಳು,ವೈದ್ಯಧಿಕಾರಿಗಳು . ಜೆಸ್ಕಾಂ ಅಧಿಕಾರಿಗಳು. ಕೆಎಸ್ಆರ್ಟಿಸಿ ಅಧಿಕಾರಿಗಳು. ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ನಾಮನಿರ್ದೆಶನ ಸದಸ್ಯರುಗಳು, ಅಧಿಕಾರಿಗಳು, ಗ್ರಾ. ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ