Ad imageAd image

” ಅಂಗಡಿ, ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ಕಡ್ಡಾಯ – ಅಬ್ಬಿಗೆರೆ ವಿನೋದ್”

Bharath Vaibhav
” ಅಂಗಡಿ, ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ಕಡ್ಡಾಯ – ಅಬ್ಬಿಗೆರೆ ವಿನೋದ್”
WhatsApp Group Join Now
Telegram Group Join Now

ಬೆಂಗಳೂರು: ವಿವಿಧ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ಬದುಕು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ ಅದರೆ ಜನ ಕನ್ನಡ ಭಾಷೆ ಕಲಿಯಬೇಕು ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ಕಡ್ಡಾಯ ಅಳವಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರ ಮಾರ್ಗದರ್ಶನದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ಅಬ್ಬಿಗೆರೆ ಮಖ್ಯ ರಸ್ತೆಯಲ್ಲಿರುವ ಶ್ರಿ ಡಾ.ಶಿವಕುಮಾರ ಮಹಾ ಸ್ವಾಮಿಜೀ ಪುತ್ಥಳಿ ಹತ್ತಿರ ೬೯ನೇ ಕನ್ನಡ ರಾಜ್ಯೋತ್ಸವ, ಪ್ರತ್ಯೇಕವಾಗಿ ಸರ್ಕಾರ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಣೆ, ಸ್ವಯಂ ರಕ್ತದಾನ ಶಿಬಿರ ಮತ್ತು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನೆ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದಾಡುವ ದೇವರು ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು ನಂತರ ಸರಕಾರದ ಆದೇಶ ಹೊರಡಿಸಿದರು ವ್ಯಾಪಾರಸ್ಥರು ನಾಡು ನುಡಿ ಜಲ ನೆಲ ಭಾಷೆಗೆ ಗಮನಹರಿಸಿ ಬೇಕು ಎಂದು ಅಬ್ಬಿಗೆರೆ ವಿನೋದ್ ಎಚ್ಚರಿಕೆ ನೀಡಿದ್ದಾರೆ.

ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಿಸಿ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ ಕೆ.ನಾಗಭೂಷಣ್ ಧ್ವಜಾರೋಹಣ ನೆರವೇರಿಸಿ ಬೆಂಗಳೂರಿನಲ್ಲಿ ಪರ ಭಾಷಿಕ ಜನರು ವಾಸವಾಗಿದ್ದಾರೆ ಅವರೆಲ್ಲರೂ ಮನೆಯಲ್ಲಿ ಯಾವುದೇ ಭಾಷೆ ಮಾತಾಡಲಿ ಹೊರಗಡೆ ವ್ಯಾವಹಾರಿಕ ಜೀವನದಲ್ಲಿ ಕನ್ನಡ ಮಾತಾಡುವುದು ಕಲಿಯಬೇಕು ಎಂದು ಭಾಷಿಕರಿಗೆ ಸಲಹೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಘು ಅರಸ ಸರ್ವರಿಗೂ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಸಿ ವೆಂಕಟೇಶ್ (ದೇವೇಗೌಡ), ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಧರ್ಮ ರಾಜ್ ಗೌಡ್ರು,
ಡಾ.ಲೋಕೇಶ್, ಗೋಪಾಲ, ಮಹೇಶ್, ಮುತ್ತುರಾಜ್, ಮಂಜು, ಕೃಷ್ಣಮೂರ್ತಿ, ಶ್ರಿ ನಿವಾಸ್, ಲೋಕೇಶ್ ಗೌಡ್ರು, ಶ್ರೀನಿವಾಸ್ ವಕೀಲ, ಕುಮಾರ್, ರಾಮಮೂರ್ತಿ, ಧನರಾಜ್, ಶಶಿಶೇಖರ್, ಪ್ರದೀಪ್ , ರಘು ದಾಸರಹಳ್ಳಿ ಉಪಾಧ್ಯಕ್ಷ ರಾಜ್ ನಾಯಕ್, ಯೋಗೇಶ್, ಚೇತನ್ ಸೇರಿದಂತೆ ಅಬ್ಬಿಗೆರೆ, ಕಮ್ಮಗೊಂಡನಹಳ್ಳಿ, ಶೆಟ್ಟಿಹಳ್ಳಿ, ಚಿಕ್ಕಬಾಣವಾರ, ಕೆರೆಗುಡ್ಡದಹಳ್ಳಿ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸದಸ್ಯರು ಕನ್ನಡ ಅಭಿಮಾನಿಗಳು ಸಾರ್ವಜನಿಕರು ಮುಂತಾದವರು ಇದ್ದರು.

ವರದಿ :ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!