ಕರ್ನಾಟಕ ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಹಾಗೂ ಎಂ ಏನ್ ಟ್ರೇಡರ್ಸ್ ಮಾಲೀಕರು ಮೊಹಮ್ಮದ್ ನಾಸಿರ್ ಹಾಗೂ ಮನಾಫ್ ಬೇಗ್
ಅರಸೀಕೆರೆ:ದಿನಾಂಕ 23/02/2025 ನೇ ಭಾನುವಾರ ದಿನದಂದು ಚುನಾವಣೆ ನಡೆಯಲಿರುವ.
ದೀ ಅಮಾನತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆಗೆ ಶ್ರೀಯುತ ಮೊಹಮ್ಮದ್ ನಾಸೀರ್ ಹಾಗೂ ಮುನ್ನ ಬೇಕ ಅಭ್ಯರ್ಥಿ ಚುನಾವಣೆ ಕಣದಲ್ಲಿ ಸ್ಪರ್ಧಿಸಿರುತ್ತಾರೆ.
ತಮ್ಮ ನೂರಾರು ಸ್ನೇಹಿತರೊಂದಿಗೆ ಚುನಾವಣಾ ಸಹಾಯಕ ಅಧಿಕಾರಿಯಾದ ಶ್ರೀಯುತ ರಕ್ಷಿತ್ ರವರಿಗೆ ನಾಮಪತ್ರವನ್ನು ಸಲಿಸಿದರು.

ಈ ಸಂದರ್ಭದಲ್ಲಿ ನಮ್ಮ ಮಾಧ್ಯಮದ ಜೊತೆ ಮಾತನಾಡಿದ ಅಭ್ಯರ್ಥಿ ಎಂ ಡಿ ನಾಸೀರ್ ರವರು
ಬ್ಯಾಂಕ್ ನ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಸೇರಿ ಶ್ರಮಿಸುತ್ತೇವೆ.ಸೇವೆ ಮಾಡಲು ನಮಗೂ ಒಂದು ಅವಕಾಶವನ್ನು ಕಲ್ಪಿಸಿ ಕೊಡಿ ಎಂದು ಬ್ಯಾಂಕಿನ ಮತದಾರರಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ನಾಮಪತ್ರ ಸಲ್ಲಿಕೆ ಸಂದರ್ಭಗಳಲ್ಲಿ ಸಮಾಜ ಸೇವಕರು ಇನ್ನು ಅನೇಕ ಮುಸ್ಲಿಂ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.
ವರದಿ:ರಾಜು




