Ad imageAd image

ಅಂಬೇಡ್ಕರ್ ಬಗ್ಗೆ ಅವಹೇಳನೆ ಮಾಡಿದ ಅಮಿತ್ ಶಾ, ಹಾಗೂ ಮಹಿಳೆ ಸಚಿವರ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ ಸಿಟಿ ರವಿ ತಕ್ಷಣ ರಾಜೀನಾಮೆ ಕೊಡಬೇಕೆಂದು! ಭಾರತ ಕಮ್ಯುನಿಸ್ಟ್ ಪಕ್ಷ ಒತ್ತಾಯ!

Bharath Vaibhav
ಅಂಬೇಡ್ಕರ್ ಬಗ್ಗೆ ಅವಹೇಳನೆ ಮಾಡಿದ ಅಮಿತ್ ಶಾ, ಹಾಗೂ ಮಹಿಳೆ ಸಚಿವರ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ ಸಿಟಿ ರವಿ ತಕ್ಷಣ ರಾಜೀನಾಮೆ ಕೊಡಬೇಕೆಂದು! ಭಾರತ ಕಮ್ಯುನಿಸ್ಟ್ ಪಕ್ಷ ಒತ್ತಾಯ!
WhatsApp Group Join Now
Telegram Group Join Now

ಸಿಂಧನೂರು : ಸಂವಿಧಾನದ 75ನೇ ವರ್ಷ ಆಚರಣೆಯ ಚರ್ಚೆಯಲ್ಲಿ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನ ಮಾಡಿ ಮಾತುಗಳನ್ನ ಆಡಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ ಸಿಂಧನೂರು ಖಂಡಿಸುತ್ತದೆ ಅಂಬೇಡ್ಕರ್ ಅವರು ನೇತೃತ್ವದಲ್ಲಿ ರಚಿಸಿದ ಸಂವಿಧಾನದಲ್ಲಿ ದೇಶದ ಎಲ್ಲಾ ಜನರಿಗೆ ಸಮಾನ ಅವಕಾಶ ಅಧಿಕಾರ ಘನತೆಯ ಬದುಕಿನ ಆಶ್ವಾಸನೆ ಗಳಿವೆ, ಎಲ್ಲಾ ವಿಷಯಗಳು ಜಾತಿ ವ್ಯವಸ್ಥೆಯನ್ನು ಖಾಯಂಗೊಳಿಸಿ ಹುಚ್ಚ ನೀಚ ಮೇಲು ಕೀಳುಗಳನ್ನು ಪ್ರತಿಪಾದಿಸುವ ಮನು ವಾದವನ್ನು ಒಪ್ಪುವ ಅಮಿತ್ ಶಾ ಮತ್ತು ಅವರ ಪಕ್ಷಕ್ಕೆ ಸಹನಿಯವಲ್ಲ ಹಾಗಾಗಿ ಅವರ ಸಂವಿಧಾನದ ಅಡಿಯಲ್ಲಿಯೇ ಕಾರ್ಯನಿರ್ವಹಿಸಬೇಕಾದ ಸಂಸತ್ತಿನಲ್ಲಿಯೇ ನಿಂತು ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ಸಂವಿಧಾನವನ್ನು ಮತ್ತು ದೇಶದ ಜನರನ್ನು ಅವಮಾನಿಸಿದ್ದಾರೆ.

“ಅದಲ್ಲದೆ ಕರ್ನಾಟಕ ವಿಧಾನ ಪರಿಷತ್ ನಲ್ಲಿ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಯವರು ರಾಜ್ಯದ ಮಹಿಳಾ ಸಚಿವರನ್ನು ಉದ್ದೇಶಿಸಿ ಆಡಿದ ಮಾತು ಆಕ್ಷೇಪರ್ಹ ಅಪರಾಧವಾಗಿದೆ ದೇಶದಲ್ಲಿ ಸಂವಿಧಾನವು ಮಹಿಳೆಯರಿಗೆ ಘನತೆಯ ಬದುಕಿನ ಅಧಿಕಾರವನ್ನು ನೀಡಿದೆ ಅದಕ್ಕೆ ಎಂಎಲ್ಸಿ. ಸಿ ಟಿ ರವಿಯವರು ಧಕ್ಕೆ ತಂದಿದ್ದಾರೆ ಮಹಿಳೆಯರ ಘನತೆಗೆ ಕುಂದುಂಟು ಮಾಡುವ ಶಬ್ದವನ್ನು ಬಯಸುತ್ತಾರೆ ಇದು ಖಂಡನೆಯ ಇಂಥವರು ಅಧಿಕಾರದಲ್ಲಿರುವುದು ನೈತಿಕತೆ ಇಲ್ಲ ಇವರ ಅನುಚಿತ ವರ್ತನೆ ಗುರುತರವಾದ ಅಪರಾಧವಾಗಿದೆ ಕೂಡಲೆ ಇವರ ಸದಸ್ಯವನ್ನು ರದ್ದುಪಡಿಸಬೇಕೆಂದು “ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ ವಾದಿ)
ತಾಲೂಕು ಸಮಿತಿ ಸಿಂಧನೂರ ಮಾನ್ಯ ಘನವೆತ್ತ ರಾಷ್ಟ್ರಪತಿಗಳಿಗೆ ಮಾನ್ಯ ತಸಿಲ್ದಾರರು ಸಿಂಧನೂರು ಇವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ – ಬಸವಂತರಾಯ ಗೌಡ, ಎಸ್, ದೇವೇಂದ್ರಗೌಡ, ಶೇಕ್ಷ ಖಾದ್ರಿ, ರೇಣುಕಮ್ಮ, ಶರಣಮ್ಮ ಮೌಲಾಸಾಬ್, ಅಪ್ಪಣ್ಣ, ಮುರ್ತುಜಾ, ಇನ್ನು ಅನೇಕರಿದ್ದರು

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!