ಸೇಡಂ:ತಾಲೂಕ ಆಸ್ಪತ್ರೆಯಲ್ಲಿ ತುರ್ತು ನಿಗ ಘಟಕವಿದ್ದು ವೈದ್ಯರಿಲ್ಲ ಅತಿ ಶೀಘ್ರದಲ್ಲಿ ವೈದ್ಯರನ್ನು ನೇಮಿಸಬೇಕು ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಕುರುಡರಿಗೆ ಅಂಗವಿಕಲ ದೃಢೀಕರಣ ಪ್ರಮಾಣ ಪತ್ರ ನೀಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಲ್ಬುರ್ಗಿ ಮಾನ್ಯ ತಾಲೂಕ ಆರೋಗ್ಯ ಅಧಿಕಾರಿಗಳು ಸೇಡಂರವರ ಮುಖಾಂತರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಸೇಡಂ ತಾಲೂಕ ಆಸ್ಪತ್ರೆಯಲ್ಲಿ ತುರ್ತು ನಿಗ ಘಟಕವಿದ್ದು ವೈದ್ಯರಿಲ್ಲದ ಕಾರಣ ಸಣ್ಣಪುಟ್ಟ ಅಪಘಾತಗಳಾದಾಗ ಬಾಣಂತಿಯರಿಗೆ ಹಾವು ಕಚ್ಚಿದಾಗ ಆಸ್ಪತ್ರೆಯ ವೈದ್ಯರು ನೇರವಾಗಿ ರೋಗಿಗಳನ್ನು ಕಲಬುರಗಿ ಆಸ್ಪತ್ರೆಗೆ ರವಾನೆ ಮಾಡುತ್ತಾರೆ ಏಕೆಂದು ಕೇಳಿದರೆ ನಮ್ಮ ಆಸ್ಪತ್ರೆಯಲ್ಲಿ ತುರ್ತು ನಿಗ ಘಟಕವಿಲ್ಲ ಎಂದು ಹೇಳುತ್ತಾರೆ ರಾತ್ರಿ ವೇಳೆಯಲ್ಲಿ ರೋಗಿಗಳು ಸೇಡಂ ಆಸ್ಪತ್ರೆಗೆ ಹೋದರೆ ವೈದ್ಯರು ಇರುವುದಿಲ್ಲ ಇದ್ದ ಅಷ್ಟು ವೈದ್ಯರು ಪ್ರಥಮ ಚಿಕಿತ್ಸೆ ಸಹ ಮಾಡದೆ ಎಷ್ಟೋ ರೋಗಿಗಳಿಗೆ ಕಲಬುರ್ಗಿಗೆ ರವಾನಿಸಿದ್ದು ಉದಾಹರಣೆ ಇದೆ ಆದ್ದರಿಂದ ಅತಿ ಶೀಘ್ರದಲ್ಲಿ ತುರ್ತು ನಿಘ ಘಟಕಕ್ಕೆ ವೈದ್ಯರನ್ನು ನೇಮಿಸಬೇಕು ಮತ್ತು ವೈದ್ಯರಿಗೆ ಸಿಬ್ಬಂದಿ ವರ್ಗಕ್ಕೆ ರೋಗಿಗಳಿಗೆ ಸರಿಯಾದ ರೀತಿ ಹಾರೈಕೆ ಮಾಡಲು ತಿಳಿಸಬೇಕು. ರೋಗಿಗಳಿಗೆ ಏಕವಚನದಲ್ಲಿ ಮಾತನಾಡಿದ್ದು ಸಹ ನಮ್ಮ ಹತ್ತಿರ ವಿಡಿಯೋ ಇರುತ್ತವೆ.
ಸರ್ಕಾರಿ ಸೇಡಂ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ನಾಲ್ಕೈದು ವರ್ಷಗಳಿಂದ ಕುರುಡರಿಗೆ ಕುರುಡರಿದ್ದರು ದೃಢೀಕರಣ ಪ್ರಮಾಣ ಪತ್ರ ನೀಡುತ್ತಿಲ್ಲ ಈ ಹಿಂದೆ ಎಷ್ಟೋ ಜನ ಕಾಲು ಕಳೆದುಕೊಳ್ಳದೆ ಕಣ್ಣು ಕಳೆದುಕೊಳ್ಳದೆ ದೃಢೀಕರಣ ಪ್ರಮಾಣ ಪತ್ರ ನೀಡಿದ ವೈದ್ಯರಿದ್ದಾರೆ ಆದರೂ ಸತ್ಯವಾಗಲೂ ಕಾಲು ಕಣ್ಣು ಕಳೆದುಕೊಂಡ ವ್ಯಕ್ತಿಗಳಿಗೆ ದೃಢೀಕರಣ ನೀಡುತ್ತಿಲ್ಲ. ವೈದ್ಯರು ನಿರ್ಲಕ್ಷ ಧೋರಣೆ ಮಾಡುತ್ತಿದ್ದಾರೆ.
ಸದ್ಯ ಮುಂಬರುವ ಕ್ಯಾಂಪಿನಲ್ಲಿ ದೃಢೀಕರಣ ನೀಡಬೇಕು ಎಷ್ಟು ವ್ಯಕ್ತಿಗಳು ಕೂಲಿ ಕಾರ್ಮಿಕರು ಬಡವರು ನಿರ್ಗತಿಕರು ಕಣ್ಣು ಕಳೆದುಕೊಂಡ ಉದಾಹರಣೆ ಇದೆ ಇವರು ಪಿಂಚಣಿಗಾಗಿ ಧೃಡೀಕರಣ ಪತ್ರ ಕೇಳಿದರೆ ಕೊಡುತ್ತಿಲ್ಲವೆಂದರೆ ಇದು ಯಾವ ನ್ಯಾಯ ಅದರಿಂದ ವೈದ್ಯರಿಗೆ ತಿಳಿಸಿ ದೃಢೀಕರಣ ನೀಡಬೇಕು ಒಂದು ವೇಳೆ ನಮ್ಮ ಬೇಡಿಕೆ ಎಂಟು ದಿವಸದೊಳಗಾಗಿ ಈಡೇರಿಸಲಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಸ್ಪತ್ರೆ ಸೇಡಂ ಎದುರುಗಡೆ ಉಪವಾಸ ಸತ್ಯಾಗ್ರಹ ಕೂಡುತವೆಂದು ಸಮಸ್ತ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಕೊಡುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಹೇಶ್ ನಾಟಿಕರ್, ಚಂದ್ರಶೇಖರ್ ಪೂಜಾರಿ, ದೇವುಕುಮಾರ್ ನಾಟಿಕರ್, ಗುಂಡಪ್ಪ ಪೂಜಾರಿ, ಮಲ್ಲಿಕಾರ್ಜುನ್ ಬೆನಕನಹಳ್ಳಿ, ರವಿ ಮದರಿ, ಕಿರಣ್ ಕುಮಾರ್, ಪ್ರವೀಣ್ ಕುಲ್ಕರ್ಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್