Ad imageAd image

ಮುಂದೆ ಬರುವ ಮಾರ್ಚ್ ತಿಂಗಳ ಒಳಗೆ ಎಲ್ಲಾ ಅನುದಾನವನ್ನು ಉತ್ತಮ ಕಾರ್ಯಕ್ರಮಗಳಿಗೆ ಬಳಕೆ ಮಾಡಿ ವಾಪಸು ಹೋಗದ ಹಾಗೆ ನೋಡಿಕೊಳ್ಳಬೇಕು. ಎನ್ ವೈ ಗೋಪಾಲಕೃಷ್ಣ.

Bharath Vaibhav
ಮುಂದೆ ಬರುವ ಮಾರ್ಚ್ ತಿಂಗಳ ಒಳಗೆ ಎಲ್ಲಾ ಅನುದಾನವನ್ನು ಉತ್ತಮ ಕಾರ್ಯಕ್ರಮಗಳಿಗೆ ಬಳಕೆ ಮಾಡಿ ವಾಪಸು ಹೋಗದ ಹಾಗೆ ನೋಡಿಕೊಳ್ಳಬೇಕು. ಎನ್ ವೈ ಗೋಪಾಲಕೃಷ್ಣ.
WhatsApp Group Join Now
Telegram Group Join Now

ಮೊಳಕಾಲ್ಮೂರು:- ಬರುವ ಮಾರ್ಚ್ ತಿಂಗಳ ಒಳಗೆ ಎಲ್ಲಾ ಅನುದಾನವನ್ನು ಬಳಕೆ ಮಾಡಿಕೊಂಡು ಯಾವುದೇ ಅನುದಾನವನ್ನು ಹಿಂದಕ್ಕೆ ಹೋಗದ ಹಾಗೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಎನ್ ವೈ ಗೋಪಾಲಕೃಷ್ಣ.ಸೋಮವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಅಧಿಕಾರಿಗಳು ತಮ್ಮ ಅನುದಾನವನ್ನು ಮಾರ್ಚ್ ತಿಂಗಳ ಒಳಗಡೆ ಒಳ್ಳೆಯ ಕೆಲಸಕ್ಕೆ ಬಳಸಿಕೊಂಡು ಯಾವುದೇ ಅನುದಾನವು ಹಿಂದಕ್ಕೆ ಹೋಗದ ಹಾಗೆ ನೋಡಿಕೊಳ್ಳಬೇಕು ಇಲ್ಲದಿದ್ದಲ್ಲಿ ನೀವು ಬೇರಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಾನು ಈ ಬಾರಿ ಶಾಸಕನಾಗಿ ಬಂದಮೇಲೆ ತಾಲೂಕು ಉತ್ತಮ ಪ್ರಗತಿಯಲ್ಲಿ ಇದೆ ಎಂದು ಅಂದುಕೊಂಡಿದ್ದೆ ಇಲ್ಲಿ ಕಳೆದ ಬಾರಿ ಶಾಸಕರು ಸಚಿವರಾಗಿದ್ದು ಉತ್ತಮ ಕೆಲಸ ಮಾಡಿದ್ದಾರೆ ಎಂದು ಅಂದುಕೊಂಡಿದ್ದೆ ಆದರೆ ಕಳೆದ ಹತ್ತು ವರ್ಷಗಳ ಹೇಗಿದೆಯೋ ಹಾಗೆ ಇದೆ ಇಲಿನಾ ಅಧಿಕಾರಿಗಳು ಜನರು ಹಾಗೆ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಿಡಿಪಿಓ ಪಿಡಬ್ಲ್ಯೂಡಿ ಇಲಾಖೆ ಆರೋಗ್ಯ ಇಲಾಖೆ ಅಬಕಾರಿ ಇಲಾಖೆ ಇನ್ನೂ ಅನೇಕ ಇಲಾಖೆಯ ವರದಿಗಳನ್ನು ತಿಳಿದುಕೊಂಡರು ಅದೇ ರೀತಿ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಸುಮಾರು 100 ಕೋಟಿಯ ಕೆಲಸ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ನನ್ನ ಅನುದಾನದಲ್ಲಿ ಇನ್ನು ಯಾವ್ಯಾವ ಕೆಲಸ ಮಾಡಬೇಕು ಅದನ್ನು ನಾನು ಮಾಡಿಕೊಂಡು ಹೋಗುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ ಇದ್ದಲ್ಲಿ ಉತ್ತಮ ಕೆಲಸ ಮಾಡಲು ಸಹಾಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಟಿ ಜಗದೀಶ್ ಈ ಓ ತಾಲೂಕು ಮಟ್ಟದ ಅಧಿಕಾರಿಗಳಾದ ಬಿ ಓ ನಿರ್ಮಲಾದೇವಿ ಸಿಡಿಪಿಓ ಪಿ ಡಬ್ಲ್ಯೂ ಡಿ ಲಕ್ಷ್ಮೀನಾರಾಯಣ ಕೃಷಿ ಎಇ ಪ್ರಕಾಶ್ ತೋಟಗಾರಿಕೆ ಸುಧಾಕರ್ ಇನ್ನು ಕೆಲ ಅಧಿಕಾರಿಗಳು ಇನ್ನೂ ಹಲವಾರು ಉಪಸ್ಥಿತರಿದ್ದರು

ವರದಿ:- ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!