ಸೇಡಂ:ದೇಶದ ಬಡಜನರಿಗೆ ರೈತರು, ಕಾರ್ಮಿಕರು, ಮಹಿಳೆಯರು, ಶೋಷಿತರು ಮತ್ತು ಹಿಂದುಳಿದ ವರ್ಗದ ಸಮುದಾಯ ಗಳಿಗೆ ಸಂವಿಧಾನದ ಮೂಲಕ ಸಮಾನತೆ ತಂದುಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡನೀಯ’ ಎಂದು ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷ ಗೋಪಾಲ ನಾಟೇಕಾರ ವ್ಯಕ್ತಪಡಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್, ಸಂವಿಧಾನದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗೌರವ ಇದ್ದರೆ ಅಮಿತ್ ಶಾ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು. ದೇಶದ ಜನರ ಬಳಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
ಸರ್ವ ಜನಾಂಗದವರು ಸಮಾನತೆ, ಸಹಬಾಳ್ವೆಯಿಂದ ಜೀವನ ನಡೆಸಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಲಿ ಎಂದು ವಿಶ್ವಜ್ಞಾನಿ ಅಂಬೇಡ್ಕರ್ರವರು ದೇಶಕ್ಕೆ ಸಂವಿಧಾನದ ಮೂಲಕ ಸ್ವತಂತ್ರವಾಗಿ ಜೀವಿಸುವಂತಹ ಹಕ್ಕನ್ನು ಕಲ್ಪಿಸಿದ್ದಾರೆ.
ಅಂಬೇಡ್ಕರ್ ಪೂರ್ವ ಘಟ್ಟದಲ್ಲಿ ದಲಿತರು ಶೋಷಣೆಗೆ ಒಳಪಟ್ಟಾಗ ಯಾವುದೇ ಧರ್ಮವಾಗಲಿ, ಯಾವುದೇ ದೇವರಾಗಲಿ ಕಾಪಾಡಲಿಲ್ಲ. ನಮ್ಮ ರಕ್ಷಣೆಗೆ ನಿಂತಿದ್ದು ಅಂಬೇಡ್ಕರ್ರವರು ರಚಿಸಿದ ಭಾರತದ ಸಂವಿಧಾನ ಒಂದೇ. ಸಂವಿಧಾನ ಕೊಡುಗೆ ನೀಡಿದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೇ ಅಮಿತ್ ಶಾ ಅಂಬೇಡ್ಕರ್ ಭಾವಚಿತ್ರ ಹಿಡಿದು ಸಾರ್ವಜನಿಕವಾಗಿ ಕ್ಷಮೇಯಾಚಿಸಿ, ತಮ್ಮ ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗೋಪಾಲ ನಾಟೇಕಾರ ಪ್ರಕಟಣೆಯಲ್ಲಿ ತಿಳಿಸಿದ್ದರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್