ಮೊಳಕಾಲ್ಮುರು: ಕೂಡಲೇ ಗೃಹ ಮಂತ್ರಿ ಅಮಿತ್ ಶಾ ರವರನ್ನು ಉಚ್ಛಾಟಿಸಬೇಕು ಎಂದು ದಲಿತ ಮುಖಂಡ ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯರಾದ ಜಿ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸೋಮವಾರ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ರವರು ನೀಡಿರುವ ಹೇಳಿಕೆಯು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ.
ಈ ದೇಶಕ್ಕೆ ಸಂವಿಧಾನವನ್ನು ಬರೆದ ಯುಗ ಪುರುಷನಿಗೆ ಅವನಮಾನ ಮಾಡಿರುವುದು ನಾವು ಖಂಡಿಸುತ್ತೇವೆ ದಲಿತ ವಿರೋಧಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರನ್ನು ರಾಷ್ಟ್ರಪತಿಗಳು ಕೂಡಲೇ ಅಮಾನತ್ತು ಗಳಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಹಿಡಿಯಬೇಕಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಬಿಟಿ ನಾಗಭೂಷಣ್ ಮಾತನಾಡಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರನ್ನು ಅವಮಾನ ಮಾಡಿರುವ ಬಿಜೆಪಿ ಮುಖಂಡ ಅಮಿತ್ ಶಾ ರವರನ್ನು ದೇಶದ ಪ್ರತಿಯೊಬ್ಬರಿಗೂ ನೋವಿನ ಸಂಗತಿಯಾಗಿದೆ. ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಹಕ್ಕು ನೀಡಿರುವುದು ಅಂಬೇಡ್ಕರ್ ಈ ದೇಶದ ದಲಿತರ ಪಾಲಿನ ನಿಜವಾದ ದೇವರು ಎಂದರೆ ಅಂಬೇಡ್ಕರ್ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕೆರೆಕೊಂಡಾಪುರ ಪರಮೇಶಪ್ಪ ಮಾತನಾಡಿ ದಲಿತ ವಿರೋಧಿ ಅಮಿತ್ ಶಾ ಈ ಕೂಡಲೇ ಗೃಹ ಮಂತ್ರಿ ಸ್ಥಾನದಿಂದ ವಜಾ ಗೊಳಿಸಬೇಕು ಮತ್ತು ಕಠಿಣ ಶಿಕ್ಷೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮುಲ್ಲಾ ತಾಲೂಕು ಸಂಚಾಲಕ ಚಂದ್ರಶೇಖರ್ ಉಮೇಶ್ ಲಕ್ಷ್ಮಣ್ ಆನಂದ ಚಂದ್ರಶೇಖರ್ ಹೆಜ್ಜೆನಳ್ಳಿ ನಾಗರಾಜ್ ರಾಜ ತಿಪ್ಪೇಸ್ವಾಮಿ ತುಮಕೂರಲ್ಲಿ ಈರಣ್ಣ ಇನ್ನು ಹಲವಾರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ