ಹುಮನಾಬಾದ : ಹುಮನಾಬಾದ ಪಟ್ಟಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತೋತ್ಸವವನ್ನು ತಾಲ್ಲೂಕ ಬಂಜಾರ ಸಮಾಜ ವತಿಯಿಂದ ಶನಿವಾರ ಆಯೋಜಿಸಲಾಗಿತ್ತು.
ಜಯಂತಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಡಾ.ಸಿದ್ದು ಪಾಟೀಲ ಅರವರು ಪಾಲ್ಗೊಂಡು ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭವ್ಯವಾದ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ಪಟ್ಟಣದ ಪ್ರಮುಖರು ವೃತ್ತದ ಮೂಲಕ ಸಂತ ಸೇವಾಲಾಲರ ಭಾವ ಚಿತ್ರದ ಮೆರವಣಿಗೆ ಜರುಗಿತ್ತು.ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರು,ಯುವಕರು,ಯುವತಿಯರು ಕುಣಿದು ಕುಪ್ಪಳಿಸಿದರು.
ಇದೆ ಸಂದರ್ಭದಲ್ಲಿ ತಾಲ್ಲೂಕ ಬಂಜಾರ ಸಮಾಜದ ಅಧ್ಯಕ್ಷ ಶಂಕರ ಪವರ್ ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿ ಮೆರವಣಿಗೆಗೆ ಹೆಚ್ಚಿನ ಜೋಷ್ ನೀಡಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರು,ಯುವಕರು ಭಾಗಿಯಾಗಿದ್ದರು.




