ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದಂತಹ ಅನ್ನಭಾಗ್ಯ ಯೋಜನೆ ಬಡವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ.
ಇದೀಗ ಈ ಯೋಜನೆ ಕುರಿತು ಸಿನಿಮಾ ತಯಾರಿಸಲು ನಿರ್ಧಾರ ಮಾಡಲಾಗಿದ್ದು ಮುಂದಿನ ವರ್ಷ ಅಂದರೆ 2025 ಫೆಬ್ರವರಿ 2ರಂದು ‘ಅನ್ನಭಾಗ್ಯ’ ಯೋಜನೆ ಕುರಿತು ಚಿತ್ರೀಕರಣ ಪ್ರಾರಂಭವಾಗಲಿದೆ.
2025 ಫೆಬ್ರವರಿ 2ರಂದು ಸಿನಿಮಾ ಚಿತ್ರಣ ಆರಂಭ ಮಾಡಲಾಗುತ್ತಿದೆ. ಶೂಟಿಂಗ್ ಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಹ್ವಾನ ನೀಡಲಾಗಿದೆ. ಬಾಮಾ ಹರೀಶ್ ಹಾಗೂ ಪಡಿತರ ವಿತರಕರ ಸಂಘಟನೆ ಅಧ್ಯಕ್ಷ ಟಿ ಕೃಷ್ಣಪ್ಪ ನಿಯೋಗದಿಂದ ಸಿದ್ದರಾಮಯ್ಯ ಅವರಿಗೆ ಅಹ್ವಾನ ನೀಡಲಾಗಿದೆ.