ಸಿಂಧನೂರು : ರಾಯಚೂರು ಮತ್ತು ಕೊಪ್ಪಳ ವಿಭಾಗ ಮಟ್ಟದ ಸಂಘಟನಾ ಸಮಾಲೋಚನ ಸಭೆ ಇಂದು ದಿನಾಂಕ 23.12.2024 ರಂದು ರಾಮದೇವ ಕಲ್ಯಾಣ ಮಂಟಪ ಸಿಂಧನೂರಿನಲ್ಲಿ ಸಮಾಲೋಚನ ಸಭೆ ನೆರವೇರಿಸಿದರು
ಈ ಸಂಘಟನಾ ಸಮಾಲೋಚನ ಸಭೆಯಲ್ಲಿ ಮಾನವ ಬಂದುತ್ವ ವೇದಿಕೆ ಉದ್ದೇಶ ಬಗ್ಗೆ ವೇದಿಕೆ ಮುಖಂಡರು ಮಾತನಾಡಿದ್ದು ಹೀಗೇ.. ಮಾನವೀಯ ಮೌಲ್ಯಗಳು ಮತ್ತು ಸಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ. ಸಮಾನತೆ. ಬಂದುತ್ವ ಹಾಗೂ ಸಾಮಾಜಿಕ ನ್ಯಾಯದ ತತ್ವಗಳ ಆದರದಲ್ಲಿ ಜಾತಿ. ವರುಣ.
ಲಿಂಗ. ಮತ್ತು ವರ್ಗಗಳ ಭೇದವಿಲ್ಲದೆ ಸಮುದಾಯದ ಸಂಘಟನೆಗಳನ್ನು ಕಟ್ಟುವದು ಜನರನ್ನು ಜಾಗೃತಗೊಳಿಸುವುದು ಪ್ರಜಾಪ್ರಭುತ್ವದ ಎಲ್ಲಾ ಪ್ರಕ್ರಿಯೆಗಳಲ್ಲಿ ಶೋಷಿತ ಜನ ಸಮುದಾಯವು ಸಮಾನ ಹಕ್ಕು ಮತ್ತು ಅಧಿಕಾರವನ್ನು ಪಡೆಯುವಂತೆ ಮಾಡುವುದು ಈ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಮಾನವ ಬಂದುತ್ವ ವೇದಿಕೆಯ ಆಶಯಗಳೊಂದಿಗೆ ಗುರುತಿಸಿಕೊಂಡು ಕೈ ಜೋಡಿಸಲು ಸಿದ್ದರಿರುವ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಪೂರಕವಾಗಿ ಅವಕಾಶಗಳನ್ನು ಕಲ್ಪಿಸಲು ವೇದಿಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ ಎಂದು ವೇದಿಕೆ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಸಂಘಟನಾ ಮುಖಂಡರಾದ – ಟಿ. ರತ್ನಾಕರ ಜಿಲ್ಲಾ ಸಂಚಾಲಕರು ಕೊಪ್ಪಳ, ಅಲ್ಲಮಪ್ರಭು ಪೂಜಾರ್ ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್ ಕಾರ್ಯದರ್ಶಿಗಳು ಸಿಂಧನೂರು, ಶುಕರಾಜ ತಾಳಿಕೇರಿ, ನಿಕಟ ವರ್ತಿ ಜಿಲ್ಲಾ ಸಂಚಾಲಕರು ಕೊಪ್ಪಳ, ಶಿವರಾಜ ನಾಯಕ ಜಿಲ್ಲಾ ಸಂಚಲಕರು ರಾಯಚೂರು, ಇನ್ನು ಅನೇಕರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.