ಮಾನ್ವಿ : ವಿದ್ಯುತ್ ಸ್ಪರ್ಶ ಸಂಭವಿಸಿದ ಪರಿಣಾಮ ಐವರ ಬಣವೆಗಳು ಸುಟ್ಟು ಕರಕಲಾಗಿರುವ ಘಟನೆ ಮಾನ್ವಿ ಪಟ್ಟಣದ ನಂದಿನಿ ಲೇಜೌಟ್ ನಲ್ಲಿ ನಡೆದಿದೆ.ಈರಣ್ಣ,ಮಲ್ಲಯ್ಯ,ತಿಪ್ಪಮ್ಮ,ಮಾರುತಿ ಹಾಗು ವೀರೇಶ ಅವರು ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡುತ್ತಿದ್ದರು.ಆದರೆ ವಿದ್ಯುತ್ ಸ್ಪರ್ಶವಾದ ಹಿನ್ನೆಲೆಯಲ್ಲಿ ಅಂದಾಜು 5 ಲಕ್ಷ ರುಪಾಯಿ ನಷ್ಟವಾಗಿದೆ ಎಂದು ನೊಂದವರ ಕೂಗಾಗಿದೆ.
ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಒಂದು ವಾಹನ ಇರುವುದರಿಂದ ನಂದಿಸುವ ಕಾರ್ಯ ಕೂಡ ಸ್ವಲ್ಪ ವಿಳಂಭವಾಯಿತು.ರಾಜಕಾರಣಿಗಳು ಸಹ ಅಗ್ನಿಶಾಮಕ ಠಾಣೆಗೆ ವಾಹನ ತರಿಸುವ ಕೆಲಸ ಮಾಡಬೇಕು ಎಂದು ನೊಂದವರು ಆಗ್ರಹ ಒತ್ತಾಸೆಯಾಗಿದೆ.
ವರದಿ : ಶಿವ ತೇಜ