ಹನೂರು : ಮೈಸೂರಿನ ಕೆ.ಜಿ.ಕೊಪ್ಪಲಿನ ಶಿವು ಹಾಗೂ ಸ್ನೇಹಿತರು ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾಗಿರುವ ಕೆ.ಜಿ.ಕೊಪ್ಪಲಿನ ಶಿವುರವರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವಅಷ್ಟೋತರ ಬಿಲ್ವಾರ್ಚನೆ ಪೂಜೆ ಮಾಡಿಸಿದ್ದಾರೆ. ಇವರಿಗೆ ಸ್ನೇಹಿತರಾದ ದರ್ಶನ್, ಅಭಿರಾಜ್, ಮನೋಹರ್, ಟಿ ನಾರಾಯಣ್ ಶಿವಮಲ್ಲು ಸಾಥ್ ನೀಡಿದ್ದಾರೆ.
ಇದಲ್ಲದೆ ದೇವಸ್ಥಾನದ ಸುತ್ತಲೂ ಮೂರು ಬಾರಿ ಉರುಳು ಸೇವೆ ಮಾಡಿ ಕೇಶ ಮುಂಡನೆ ಮಾಡಿಸುವ ಮೂಲಕ ವಿಶೇಷವಾಗಿ ಹರಕೆ ಸಲ್ಲಿಸಿದ್ದಾರೆ.
ಶಿವರಾಜ್ ಕುಮಾರ್ ಅವರ ಬೈರತಿ ರಣಗಲ್ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಭರ್ಜರಿ ಸ್ವಾಗತ ಕೋರಿ ಚಿತ್ರ ಶತದಿನೋತ್ಸವ ಪೂರೈಸಲೆಂದು
ಶುಭ ಕೋರಿದ್ದರು. ಶಿವರಾಜಕುಮಾರ್ ರವರು ಶಸ್ತ್ರಚಿಕಿತ್ಸೆಗೆ ಅಮೆರಿಕಾಗೆ ತೆರಳುತ್ತಿದ್ದಾಗಲು ಏರ್ಪೋರ್ಟ್ ಗೆ ಭೇಟಿ ನೀಡಿ ಬೀಳ್ಕೊಡುಗೆ ಮಾಡಿ ವಾಪಸ್ ತೆರಳಿದ್ದರು.
ವರದಿ. ಸ್ವಾಮಿ ಬಳೇಪೇಟೆ