ಬೆಂಗಳೂರು: ನಟ ಶಿವರಾಜಕುಮಾರ್ ಆರೋಗ್ಯ ಸ್ಥಿರವಾಗಿದ್ದು ಅವರ ಹೆಲ್ತ್ ಬಗ್ಗೆ ಮಿಯಾಮಿ ಆಸ್ಪತ್ರೆ ವೈದ್ಯರು ಹಾಗೂ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿಡಿಯೋ ಹಂಚಿಕೊಂಡಿರುವ ಗೀತಾ, ಶಿವರಾಜ್‌ಕುಮಾರ್ ಆರೋಗ್ಯ ಚೆನ್ನಾಗಿದ್ದು, ಈಗ ಐಸಿಯುವಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.ಅಭಿಮಾನಿಗಳ ಪ್ರೀತಿಗೆ ತಾವು ಋಣಿ ಎಂದಿರುವ ಗೀತಾ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.
ಇನ್ನು ಶಿವಣ್ಣಗೆ ಮಾಡಿದ ಆಪರೇಷನ್ ಯಶಸ್ವಿಯಾಗಿ ಸಂಪೂರ್ಣವಾಗಿದೆ ಎಂದು ಅಲ್ಲಿನ ವೈದ್ಯ ಮನೋಹರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವರಾಜ್ ಕುಮಾರ್‌ಗೆ ಕ್ಯಾನ್ಸರ್ ತಗುಲಿದ ಮೂತ್ರಪಿಂಡವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ರೋಗವನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಅವರದ್ದೇ ಕರಳನ್ನು ಬಳಸಿ ಕೃತಕ ಮೂತ್ರಪಿಂಡವನ್ನು ಮತ್ತೆ ಅಳವಡಿಸಲಾಗಿದೆ ಎಂದರು.
ಶಿವಣ್ಣ ಮಾನಸಿಕ ಹಾಗೂ ದೈಹಿಕವಾಗಿ ಅತ್ಯಂತ ಧೈರ್ಯವಾಗಿದ್ದಾರೆ. ಆಪರೇಷನ್ ಸಮಯದಲ್ಲಿ ಹಾಗೂ ನಂತರವೂ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಇರಲಿಲ್ಲ. ಸ್ವಲ್ಪ ದಿನದಲ್ಲೇ ಅವರು ಚೇತರಿಸಿಕೊಂಡು ಸಾಮಾನ್ಯ ಜೀವನಕ್ಕೆ ಮರಳಲಿದ್ದಾರೆ ಎಂದು ಹೇಳಿದರು.