Ad imageAd image

ಐನಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್‌ ಚಟುವಟಿಕೆಗಳ ಉದ್ಘಾಟನೆ ಬಿ.ಎ.  ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

Bharath Vaibhav
ಐನಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್‌ ಚಟುವಟಿಕೆಗಳ ಉದ್ಘಾಟನೆ ಬಿ.ಎ.  ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
WhatsApp Group Join Now
Telegram Group Join Now

ಐನಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ದುಡಿಯಲು, ತಿನ್ನಲು ಎಂದು ನಾಚಿಕೆ ಪಡಬಾರದು ಅದೇರೀತಿ ಪದವಿ ಪಡೆಯುವ ಮೂರು ವರ್ಷದಲ್ಲಿ ಪದವಿಕಾಲೇಜನಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸ,ಸಾಧನೆ,ಪಯತ್ನ ಮಾಡಿದರೆ ಯಶಸ್ಸು ಸಿಗುತ್ತದೆ. ಎಂದು ಹುಕ್ಕೇರಿ ಸರಕಾರಿ ಪ್ರಥಮ ದರ್ಜೇಕಾಲೇಜನ ಪ್ರಾಚಾರ್ಯರಾದ ಡಾ.ಸತೀಶ ಮೋಹಿತೆ ಹೇಳಿದರು.   ಅವರು ಐನಾಪುರ ಪಟ್ಟಣದ  ಸರಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ  ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್‌ ಚಟುವಟಿಕೆಗಳ ಉದ್ಘಾಟನೆ ಮತ್ತು ಬಿ.ಎ.  ಬಿಕಾಂ ವಿದ್ಯಾರ್ಥಿಗಳ ಸ್ವಾಗತ  ಸಮಾರಂಭವನ್ನು .

ಸಸಿಗೆ ನೀರೆಯುವದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ  ವಿದ್ಯಾರ್ಥಿಗಳು ಲಕ್ಷ್ಯಕೊಟ್ಟು ಓದಿದರೆ ಲಕ್ಷ ಗಟ್ಟಲೆ ಹಣ ಗಳಿಸಬಹುದು ಎಂದ ಅವರು ಅವಕಾಶಗಳು ಸಹಜವಾಗಿ ಸಿಗುವುದಿಲ್ಲ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳಬೇಕು ಚಾಲೆಂಜನ್ನು ಹೇಗೆ ಸ್ವೀಕಾರ ಮಾಡಬೇಕೆಂದರೆ ಅದು ನಮ್ಮಗೆ ಗೊತ್ತಿರಬಾರದು ಎಂದರು ವಿದ್ಯಾರ್ಥಿ ಜೀವನ ಅಮೂಲ್ಯವಾದ ಸಂಪತ್ತು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂದುವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ  ಪಟ್ಟಣ ಪಂಚಾಯತ ಅಧ್ಯಕ್ಷೆ ಸರೋಜನಿ ಸುರೇಶ ಗಾಣಿಗೇರ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಪದವಿ ಇಲ್ಲದ್ದಿರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಪದವಿ ಪಡೆದವರು ನೌಕರಿ ಮಾಡಿ ಜೀವನ ನಿರ್ವಹಿಸದೆ ಒಳ್ಳೆಯ ರಾಜಕಾರಣಿ, ರೈತ, ಬಿಜಿನೆಸ್ ಮ್ಯಾನ ಆಗಬಹುದು ಪದವಿ ಪಡೆದುಕೊಂಡರೆ ಸಮಾಜದಲ್ಲಿ ಗೌರವಯುತ ಬದುಕ ಸಾಗಿಸಬಹುದು ಎಂದರು.

ಅಧ್ಯಕ್ಷತೆಯನ್ನು ಪ್ರಾಚಾರ್ಯ  .ಎನ್ .ಕೆ ಮಾಂಗ ವಹಿಸಿದರು. ಪ್ರಾಸ್ತಾವಿಕವಾಗಿ ಸಾಂಸ್ಕೃತಿಕ ವಿಭಾಗ ಮುಖ್ಯಸ್ಥ ರಾದ ಉಪನ್ಯಾಸಕ ಕಪೀಲ ಕಾಂಬಳೆ ಮಾತನಾಡಿದರು. ಉಪನ್ಯಾಸಕರಾದ ಸೊಹೆಲ್ ಸತ್ತಿಕರ,ಸಾಗರಿಕಾ ಎಚ್ ಶೃತಿ,ಮೇಲಿದರು.

ಇ ಸಂದರ್ಭದಲ್ಲಿ  ಕಾಲೇಜಿನ ಎಲ್ಲ ಭೋಧಕರು, ಸಿಬ್ಬಂದಿಗಳು ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಉಪಸ್ಥಿತಿತರಿದರು. ವಿದ್ಯಾರ್ಥಿನಿ ಸೌಂದರ್ಯಗಾಣಿಗೇರ,ಪೂರ್ಣಿಮಾ ದೊಡಮನಿ, ನಿರೂಪಿಸಿದರು. , ಉಪನ್ಯಾಸಕಿ ಶಾಂತಾ ಬಂಗಾರಿ, ಸ್ವಾಗತಿಸಿದರು.  ಕನ್ನಡ ಉಪನ್ಯಾಸಕಿ ಎಚ್ ಶೃತಿ ವಂದಿಸಿದರು.

ವರದಿ: ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!