ಚೇಳೂರು : ಪೋಷಕರು ಹಾಗೂ ಗುರುಗಳು ಮಗುವಿನ ಭವಿಷ್ಯ ರೂಪಿಸುವ ರಾಯಭಾರಿಗಳು. ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಅವರಿಗೆ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ಗುರುವಂದನಾ ಕಾರ್ಯಕ್ರಮಗಳು ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿಸುತ್ತದೆ ಎಂದರು.
ತಾಲ್ಲೂಕಿನ ಪಟ್ಟಣದಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಚೇಳೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ೧೯೯೫-೯೬ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಶಿಸ್ತು ವಿದ್ಯಾರ್ಥಿಗಳ ಬದುಕಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿ ಸಂಘ ಕಟ್ಟಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಶಿಕ್ಷಕ ವಿ ಸತ್ಯ ನಾರಾಯಣ ಮಾತನಾಡಿ,ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದರು.
ಮತ್ತೋರ್ವ ನಿವೃತ್ತ ಶಿಕ್ಷಕರಾದ ಟಿ ವಿ ಲಕ್ಷ್ಮಿ ನಾರಾಯಣ ಶೆಟ್ಟಿ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿಯಾದರೇ, ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಯಲ್ಲಿ ಪಾಠ ಪ್ರವಚನ ಕೇಳುವ ಅವಿಸ್ಮರಣೀಯ ಘಟನೆಗಳನ್ನು ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡರು. ಜತೆಗೆ ಹಳೆ ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪನ್ನು ಮೆಲಕು ಹಾಕಿದರು.
ಟಿ ವಿ ಲಕ್ಷ್ಮಿ ನಾರಾಯಣ ಶೆಟ್ಟಿ,ಸಿ ನಂಜುಂಡಪ್ಪ,ಅಧಿ ನಾರಾಯಣಪ್ಪ,ಎಸ್ ಎಂ ವೆಂಕಟ ಸ್ವಾಮಿ,ಮಹಮದ್ ಗೌಸ್, ಹೆಚ್ ಡಿ ವೆಂಕಟೇಶ್,ಎಸ್ ಬಿ ಹುಚ್ಚಾ ರೆಡ್ಡಿ, ಮದ್ಧಿ ರೆಡ್ಡಿ,ಎಂ ವಿ ವೆಂಕಟರವಣಪ್ಪ,ವಿ ಸತ್ಯ ನಾರಾಯಣ,ಆರ್ ವೆಂಕಟರವಣಪ್ಪ,ರಾಧ ಮಣಿ,ಅವರನ್ನು ಹಳೆ ವಿದ್ಯಾರ್ಥಿಗಳು ಗೌರವಿಸಿದರು.
ಕಾರ್ಯಕ್ರಮದಲ್ಲಿ ರಾಮಚಂದ್ರ , ಎಸ್ ಮಂಜುನಾಥ,ಅಮರನಾಥ್, ಸುರೇಶ್ ಸುಧಾಕರ್ ಆರ್,ಗರ‍್ರಾಲ ಮಂಜುನಾಥ್, ಚೇತನ್ ಟಿ ಎನ್, ಸುಜಾತ ಪಿ ಜಿ, ರವಿ ನಾಯಕ, ಎಸ್ ಕೆ ಸುಜಾತ, ಪದ್ಮ, ಅಮರಾವತಿ, ಶ್ಯಾಮಲ, ಮಂಜುಳಾ ರಮನಮ್ಮ ಶಂಕರಮ್ಮ, ರಮಣಪ್ಪ ಆಟೋ, ನರಸಿಂಹಮರ‍್ತಿ, ಜೆಕೆ ಲಕ್ಷ್ಮೀದೇವಿ, ವೆಂಕಟೇಶ್, ಜೆಕೆ ಆನಂದ್, ರಾಮಾಂಜಿ,
ಅಬುಬಕರ್, ಶಂಕರ, ಯರ‍್ರಬಲ್ಲಿ ಮಂಜುನಾಥ,ಸೇರಿದಂತೆ ಇತರೆ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ.