ಇಳಕಲ್ :ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮೂಡಿಸಲು ಹಾಗೂ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಮ್ಮನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಈ ಕಾರ್ಯಕ್ರಮವನ್ನು ಏರ್ಪಡಿಸಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ದೇಶ ತಾಯಂದಿರು ತಮ್ಮ ಮಗ ಅಥವಾ ಮಗಳು ಹೆಚ್ಚು ಓದುವಿಕೆಯಲ್ಲಿ ತೊಡಗಿಸುವಂತೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ ಹಾಗೂ ವಿದ್ಯಾರ್ಥಿಗಳು ತಾಯಂದಿರ ಪಾದ ಮುಟ್ಟಿ ನಾವು ಇನ್ನು ಮುಂದೆ ಹೆಚ್ಚು ಹೆಚ್ಚು ವಿದ್ಯಾಭ್ಯಾಸ ಮಾಡಿ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ ಇಂತಹ ವಿಶಿಷ್ಟ ವಿಶೇಷ ಅಭಿಯಾನದೊಂದಿಗೆ ಸುಂದರ ಸಮಾರಂಭ ಏರ್ಪಡಿಸಲಾಗಿತ್ತು.
ಕಾಟಪುರ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷರಾದಂತ ಶ್ರೀ ಸಂಗಣ್ಣ ಅವಿನ್ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದಂತ ಶ್ರೀಮತಿ ಮಹಾಂತಮ್ಮ ಮಾಂತೇಶ್ ಜಗ್ಗಲ್ ಹಾಗೂ ಶ್ರೀ ಬಸವರಾಜ್ ಆವಿನ್ ಶ್ರೀ ಹನುಮಂತಪ್ಪ ತೂಗುದಲಿ ಶ್ರೀ ಮಂಜು ಪಾವಿ ಮತ್ತು ಶ್ರೀಮತಿ ಪಾರ್ವತಿ ಹರಿಜನ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷರು ಶ್ರೀ ಸಿದ್ದಣ್ಣ ಆವಿನ್ ಹಾಗೂ ಕಬ್ಬರಿಗೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದಶ್ರೀ ಮೈಲಾರಪ್ಪ ಹಾದಿಮನಿ ಹಾಗೂ ಕಾಟಾಪುರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಮಲ್ಲಪ್ಪ ಹೆಬ್ಬಾಳ್ ಮತ್ತು ಗ್ರಾಮದ ಹಿರಿಯರಾದ ಶ್ರೀ ಶಂಕ್ರಪ್ಪ ಹಳ್ಳೂರ್ ರವರು ದಾವಲ್ ಸಾಬ್ ಮುಲ್ಲಾ ಅವರು ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಸಲಿಂಗಯ್ಯ ಹಿರೇಮಠ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಶ್ರೀ ಈರಣ್ಣ ಕೊಟ್ರಣ್ಣವರ ಶಿಕ್ಷಕರು ಮಗು ಹಾಗೂ ತಾಯಂದಿರ ಬಾಂಧವ್ಯದ ಕುರಿತು ಹಾಗೂ ತಮ್ಮ ಮಗು ವಿನ ಭವಿಷ್ಯದ ಬಗ್ಗೆ ಪಾಲಕರ ಜವಾಬ್ದಾರಿಯನ್ನು ಕುರಿತು ಮಾತನಾಡಿದರು ಹಾಗೂ ಶಿಕ್ಷಕರಾದ ಶ್ರೀ ಅಯ್ಯಪ್ಪ ಚೆನ್ನನವರ್ ಶ್ರೀ ಮಲ್ಕಪ್ಪ ಚಕ್ಕಡಿ ಶ್ರೀ ವಿಕ್ರಾಂತ್ ಗಜೇಂದ್ರಗಡ ಶ್ರೀ ತಿಮ್ಮಣ್ಣ ಹಿರೇಹೊಳೆ ಶ್ರೀ ಶಿವಪ್ಪ ರಾಮದುರ್ಗ ಉಪಸ್ಥಿತರಿದ್ದರು ಈ ಕಾರ್ಯಕ್ರಮದ ರೂವಾರಿಗಳಾದ ಶ್ರೀ ವಿಜಯಕುಮಾರ್ ಮೈತ್ರಿ ರವರು ನಿರೂಪಣೆ ಮಾಡಿದರು.
ವರದಿ: ದಾವಲ್ ಶೇಡಂ