ಇಳಕಲ್ : ಇಲ್ಲಿನ ಕಂದಗಲ್ ರಸ್ತೆಯ ಗುಂಪು ಮನೆಗಳ ಆಶ್ರಮ ನಿವಾಸಿಗಳಾದ ಜಾಲಗಾರ ಕುಟುಂಬದವರು ಅನಾಥರಿಗೆ ಆಹ್ವಾನ ನೀಡಿ ಮಗನ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನೆರವೇರಿಸಿದರು ನಗರದ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಿಪಾಯಿ ಕೆಲಸ ಮಾಡುವ ಶ್ರೀಮತಿ ಶಾಂತಾ.ಜಾಲಗಾರ ಅವರ ಸುಪುತ್ರನಾದ ರಮೇಶನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವನ್ನು ವಿಶೇಷವಾಗಿ ಮಾಡಬೇಕೆನ್ನುವ ಉದ್ದೇಶದಿಂದ ಸುರಕ್ಷಾ ಸೇವಾ ಟ್ರಸ್ಟಿನ ಆಶ್ರಮಾವಾಸಿಗಳಿಗೆ ಕರೆಸಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಿದರು.
ಇಂತಹ ಕಾರ್ಯಕ್ರಮದಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರೂ ಸಂಬಂಧಿಕರನ್ನು ಆತ್ಮೀಯರನ್ನು ಕರೆಸಿ ಕಾರ್ಯಕ್ರಮ ಮಾಡುವ ಪ್ರತಿತಿ ಉಂಟು ಆದರೆ ಹೃದಯ ಶ್ರೀಮಂತಿಕೆಯ ಶಾಂತ ಜಾಲಗಾರರು ಆಶ್ರಮಾವಾಶಿಗಳನ್ನು ಕರೆಸಿ ಮಗನ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮಾಡಬೇಕೆನ್ನುವುದು ಸಮಾಜಕ್ಕೆ ಮಾದರಿ ಶ್ರೀಮಂತರು ರಾಜಕಾರಣಿಗಳನ್ನ ಸೆಲೆಬ್ರಿಟಿಗಳನ್ನು ಕರೆಸಿ ಕಾರ್ಯಕ್ರಮವನ್ನು ಆಚರಿಸಿದರೆ ಆರ್ಥಿಕವಾಗಿ ಸಬಲರಿಲ್ಲದಿದ್ದರೂ ಇಂಥ ಹೃದಯ ಶ್ರೀಮಂತಿಕೆ ಇರುವ ಜನರು ತುಂಬಾ ಅಪರೂಪ ಎಂದು ಸುರಕ್ಷಾ ಸೇವಾ ಟ್ರಸ್ಟಿನ ಅಧ್ಯಕ್ಷ ಪುರುಷೋತ್ತಮ್ ಧರಕ್ ಹೇಳಿದರು ತಾನು ಸಿಪಾಯಿ ಹುದ್ದೆಯಲ್ಲಿದ್ದರೂ ಇಂಥ ಅನಾಥರು ಮತ್ತು ನಿರ್ಗತಿಕರನ್ನು ಕರೆಯಿಸಿ ಕಾರ್ಯಕ್ರಮ ಮಾಡಿರುವುದು ಶ್ರೀಮಂತರಿಗೆ ಸಮಾಜಕ್ಕೆ ಮಾದರಿ ಎಂದು ಸಂಸ್ಥೆಯ ಕಾರ್ಯದರ್ಶಿ ಬಾಲಚಂದ್ರ ಹೇಳಿದರು ಕಾರ್ಯಕ್ರಮದಲ್ಲಿ ಜಾಲಗಾರ ಕುಟುಂಬದವರು ಹಾಗೂ ಹಾಗೂ ಅವರ ಸಂಬಂಧಿಕರು ಮತ್ತು ಆತ್ಮೀಯರು ಪಾಲ್ಗೊಂಡಿದ್ದರು
ವರದಿ : ದಾವಲ್ ಶೇಡಂ