ಗೋಕಾಕ : ಯಾವುದೆ ಕಂಪನಿ ಇರಲಿ ಗ್ರಾಹಕರೆಂದರೆ ದೇವರಿದ್ದಂತೆ,ಆದರೆ ಅದೆ ಗ್ರಾಹಕನೊಬ್ಬ ತಾನು ಖರೀದಿ ಮಾಡಿಕೊಂಡ ವಾಹನವನ್ನು ರಿಪೇರಿ ಮಾಡಿಕೊಡಲು ಕೇಳಲು ಹೋದರೆ ಅಲ್ಲಿ ಕೆಲಸ ಮಾಡುವಾತ ಗ್ರಾಹಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಗ್ರಾಹಕನೊಬ್ಬ ಆರೋಪಿಸಿದ್ದಾನೆ.
ಹೌದು ಗೋಕಾಕ ನಗರದ ಎಪಿಎಮ್,ಸಿ ಮಾರ್ಗದಲ್ಲಿ ಇರುವ ಟಾಟಾ ಮೋಟರ್ಸ ಶೋರೂಮನಲ್ಲಿ 22 ತಿಂಗಳ ಹಿಂದೆ ಗೋಕಾಕ ಪಾಲ್ಸಿನ ನೂರಮಹ್ಮದ ಮಕಾಂದಾರ ಎಂಬಾತ ಗೋಕಾಕದಲ್ಲಿರುವ ಮಾನಿಕಬಾಗಿನ ಟಾಟಾ ಮೋಟರ್ಸ್ ಶೊರೂಮನಲ್ಲಿ ಸರಕು ಸಾಗಾಣೆಕೆ ಮಾಡಿ ಜೀವನ ನಡೆಸಲು B 50 ಟಾಟಾ, ಖರೀದಿ ಮಾಡಿದ್ದ,ಖರೀದಿ ಮಾಡುವಾಗ ತೆಗೆದುಕೊಂಡ ವಾಹನ ತೊಂದರೆಯಾಗಿ ನಿಂತಿದ್ದ ಜಾಗದಿಂದ ತರುವುದಾಗಿ ಹೇಳಿದ್ದರು, ಅಷ್ಟೆ ಅಲ್ಲ ಎರಡು ವರ್ಷ ವಾರಂಟಿ, ಗ್ಯಾರಂಟಿ ಇದ್ದರೂ ವಾಹನವನ್ನು ರೀಪೆರಿ ಮಾಡಿಕೊಡುತ್ತಿಲ್ಲ ಹಲವಾರು ಬಾರಿ ವಾಹನದ ತೊಂದರೆ ಆಗುತಿರುವದನ್ನ ಹೇಳಿದರೂ ಸಹ ಕ್ಯಾರೆ ಅನ್ನುತ್ತಿಲ್ಲ,,
ಇನ್ನು ಗೋಕಾಕದಲ್ಲಿರುವ ಶೊರೂಮಗೆ ಕೇಳಲು ಹೋದರೆ ಅಲ್ಲಿನ ಕೆಲಸಗಾರ ಸಚಿನ ಎಂಬಾತ ಗ್ರಾಹಕರೆನ್ನದೆ ಚಪ್ಪಲಿ ತೊರಿಸಿ ಇಲ್ಲಿ ಶೊರೂಮ ಇಲ್ಲ ಬೆಳಗಾವಿಗೆ ಹೋಗು ನಾನು ಇಲ್ಲಿ ದುರಸ್ತಿ ಮಾಡೊದಿಲ್ಲ ಎಂದು ನಿಂದಿಸಿದ್ದಾನೆಂದು ಗಂಭೀರ ಆರೋಪ ಮಾಡಿದ್ದಾನೆ, ಅದರ ಜೊತೆಯಲ್ಲಿ ಗೋಕಾಕ ಟಾಟಾ ಮೊಟರ್ಸ ಶೊರೂಮನಲ್ಲಿ ಯಾರೂ ವಾಹನ ಖರೀದಿಸಬೇಡಿ ಎಂದು ವಿನಂತಿಸಿದ್ದಾನೆ.
ಇನ್ನು ಯಾವಾಗ ಗ್ರಾಹಕರು ನಮ್ಮ ಶೊರೂಮಗೆ ಬರುತ್ತಾರೊ,ನಮ್ಮಲ್ಲಿ ಖರೀದಿ ಮಾಡುತ್ತಾರೋ ಎಂದು ಕಾದು ಕುಳಿತಿರುವ ಈಗಿನ ಕಾಲದಲ್ಲಿ ಗ್ರಾಹಕರಿಗೆ ಚಪ್ಪಲಿ ತೊರಿಸುತ್ತಾನೆಂದರೆ ,,,ಯಾವ ರೀತಿ ಶೊರೂಮ ನಡೆಯುತ್ತದೆ ಎಂದು ಮುಂದೆ ನೋಡಬೇಕಾಗಿದೆ.
ವರದಿ : ಮನೋಹರ ಮೇಗೇರಿ



		
		
		
