Ad imageAd image

ವಿಶೇಷಚೇತನ ಮಗುವನ್ನು ದತ್ತು ಪಡೆದ ಇಟಲಿ ದೇಶದ ದಂಪತಿ

Bharath Vaibhav
ವಿಶೇಷಚೇತನ ಮಗುವನ್ನು ದತ್ತು ಪಡೆದ ಇಟಲಿ ದೇಶದ ದಂಪತಿ
WhatsApp Group Join Now
Telegram Group Join Now

ಬೆಳಗಾವಿ: ಇಲ್ಲಿನ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿನ ವಿಶೇಷಚೇತನ ಮಗುವನ್ನು ಇಟಲಿ ದೇಶದ ದಂಪತಿ ಸೋಮವಾರ ದತ್ತು ಪಡೆದರು.

ಇಟಲಿಯ ಪ್ಲಾರೆನ್ಸ್ ನಗರದ ನಿವಾಸಿಗಳಾದ ಕೋಸ್ತಾಂಜಾ ಹಾಗೂ ಬುಜಾರ್ ಡೆಡೆ ದಂಪತಿ ದತ್ತು ಪಡೆದವರು.ಈ ದಂಪತಿಗೆ ಮಕ್ಕಳಿಲ್ಲ. ಕೋಸ್ತಾಂಜಾ ಅವರು ಇಟಲಿ ಸರ್ಕಾರಿ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ವೈದ್ಯರಾಗಿದ್ದರೆ, ಬುಜಾರ್ ಡೆಡೆ ಅಪಘಾತದಲ್ಲಿ ಅಂಗವಿಕಲರಾಗಿದ್ದಾರೆ. ಅವರಂತೆ ಅಪಘಾತದಲ್ಲಿ ಕಾಲು ಕಳೆದುಕೊಂಡವರಿಗೆ ತರಬೇತಿ ನೀಡುತ್ತಾರೆ.

ದತ್ತು ಪಡೆದ ಎರಡೂವರೆ ವರ್ಷದ ಮಗುವಿಗೆ ಆನಂದ ಎಂದು ಹೆಸರಿಡಲಾಗಿದೆ. ಈ ಮಗು ಅವಧಿಪೂರ್ವ ಜನಿಸಿತ್ತು. ಆಗ 1.3 ಕೆಜಿ ತೂಕ ಮಾತ್ರ ಇತ್ತು. ದೃಷ್ಟಿದೋಷವೂ ಸೇರಿ ಆರೋಗ್ಯದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ.

ಹೆತ್ತವರು ಬಿಟ್ಟುಹೋದ ಹಸುಳೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ರಕ್ಷಣೆ ಮಾಡಿದ್ದರು. ಎರಡೂವರೆ ವರ್ಷಗಳಿಂದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಪೋಷಣೆ ಮಾಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!