ಮುದಗಲ್ಲ : ಬಾಲ್ಯದಲ್ಲಿ ಮಕ್ಕಳನ್ನು ಸಾಕಿ, ಸಲುಹಿ ಪೋಷಣೆ ಮಾಡುವುದು ತಂದೆ, ತಾಯಿಗಳ ಕರ್ತವ್ಯ. ಹಾಗೆಯೇ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ತಂದೆ ಮತ್ತು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ಎಸ್ ವಿ ಎಂ ಪ್ರೌಢ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಮಾನವಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ವನ್ನು ಉದ್ಘಾಟಿಸಿಮಾತನಾಡಿದ ಅವರು ಮಾತನಾಡಿ ವಿದ್ಯಾರ್ಥಿಗಳು ಉನ್ನತ ಹಂತದಲ್ಲಿರುವವರನ್ನು ಗಮನಿಸಿ ಅನುಕರಣೆ ಮಾಡಬೇಕು. ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯಬಾರದು ಎಂದರು.
ಇಂದಿನ ಮಕ್ಕಳು ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ,ವಾಹನಗಳಿಗೆ ವಿಮೆ, ಕಡ್ಡಾಯವಾಗಿ ಶಿಕ್ಷಣ.ಮೊಟಾರು ವಾಹನ ಕಾಯ್ದೆ ಕಾನೂನು ಅರಿವು ಮೂಡಿಸಬೇಕು ಮತ್ತು ವಿದ್ಯಾರ್ಥಿ ಪಾಲಕರು ಬಡತನದ ನೆಪ ಹೇಳಿದೆ ಉನ್ನತ ಶಿಕ್ಷಣ ನೀಡಿ ದೇಶಕ್ಕೆ ಉತ್ತಮ ಪ್ರಜೆಯಾಗಿ ಸಬೇಕು .ಎಂದುಕಾನೂನು ಅರಿವು ಜಾಗೃತಿ ಮೂಡಿಸಿದರು.
ನಂತರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ ಹೆಣ್ಣುಮಕ್ಕಳ ರಕ್ಷಣೆಗೆಂದೆ ಅನೇಕ ಜಾಗೃತಿ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಸ್ವ ಜಾಗೃತಿ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸಮಾಜವನ್ನು ಗೌರವಿಸಬೇಕು.
ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.ಬೇಟಿ ಬಚಾವೋ ಬೇಟಿ ಪಡಾವೋ, ಬಾಲ್ಯ ವಿವಾಹ, ಪೊಕ್ಸೋ-2012, ಮೋಟಾರು ಕಾಯ್ದೆ, ಬಾಲ ಕಾರ್ಮಿಕತೆ, ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಕಾವಲು ಸಮಿತಿ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕು
ಇಂದಿನ ವಿಧ್ಯಾರ್ಥಿ ಗಳು ಮೊಬೈಲ್ ಹಾಗೂ ಇತರ ಅವಶ್ಯಕ ಕಾಯ೯ಗಳನ್ನು ಮಾಡದೆ ಕೇವಲ ಶಿಕ್ಷಣದತ್ತ ಗಮನ ಹರಿಸಬೇಕು ಶಾಲಾ ಮಕ್ಕಳು ತಮ್ಮ ಉತ್ತಮ ವಿಧ್ಯಾಭ್ಯಾಸವನ್ನು ಮಾಡಿ ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಜೆಎಂಎಫ್‌ಸಿ ನ್ಯಾಯಾಧೀಶ ಅಂಬಣ್ಣ ಕೆ ಮಾತನಾಡಿದರು.
ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಜಿಲ್ಲಾ ಅಧ್ಯಕ್ಷ ಸೈಯದ್ ತಾರೀದ್ ,ಮಾನವ ಹಕ್ಕುಗಳ ತಾಲೂಕು ಅಧ್ಯಕ್ಷರಾದ ಹುಸೇನ್ ಬಾಷ, ಜಿಲ್ಲಾ ಮಹಿಳಾ ಜನ ಜಾಗೃತಿ ಸಂಘದ ಅಧ್ಯಕ್ಷೆ ಶಶಿಕಲಾ ಭೋವಿ, ಮೋಹನ್ ಪಾಟೀಲ್ ,ಮುಖ್ಯ ಶಿಕ್ಷಕರಾದ ಸಂಗಮೇಶ ಸರಗಣಚಾರಿ , ಬಾಲಚಂದ್ರ ದಾಸರ್ , ದೇವೇಂದ್ರ ನಾಯಕ್ ವಕೀಲರು, ಇತರರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ