ಬೆಂಗಳೂರು : ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಬಂಪರ್ ಗುಡ್ ನ್ಯೂಸ್ ಕೊಟ್ಟಿದೆ. ಈ ತಿಂಗಳಿಂದಲೇ ಜಾರಿಗೆ ಬರುವಂತೆ ತಲಾ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರ ತೀರ್ಮಾನಿಸಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ತಲಾ 10 ಕೆಜಿ ಘೋಷಿಸಿದ್ದ ಸರ್ಕಾರ, ಅಕ್ಕಿ ಕೊರತೆಯಿಂದ 5 ಕೆಜಿ ಅಕ್ಕಿಯನ್ನು ಫಲಾನುಭವಿಗಳಿಗೆ ಕೊಟ್ಟು ಉಳಿದ 5 ಕೆಜಿಗೆ 170 ರೂ ಮೊತ್ತವನ್ನು ನೀಡುತ್ತಾ ಬಂದಿದೆ.ಇನ್ಮುಂದೆ ಭರ್ತಿ 10 ಕೆಜಿ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡುವ ಕ್ರಮ ಕೈಗೊಂಡಿದೆ.
ಈ ವಿಚಾರವನ್ನು ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತಗೊಳಿಸಲಾಗಿದ್ದು, ಕೇಂದ್ರದಿಂದಲೇ ಅಕ್ಕಿ ಖರೀದಿಗೆ ಕ್ರಮಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆ ಕೈ ಸರ್ಕಾರದ ಪ್ರಮುಖ ಗ್ಯಾರಂಟಿ ಸ್ಕೀಮ್ ಗಳಲ್ಲಿ ಒಂದಾಗಿದೆ.
ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗದ್ದಕ್ಕೆ ವಿಪಕ್ಷಗಳು ಕೆಂಡ ಕಾರಿದ್ದವು. ಅಕ್ಕಿ ಖರೀದಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ವಾಗ್ಯುದ್ಧವೇ ನಡೆದಿತ್ತು. ಇದೀಗ ಕೇಂದ್ರದಿಂದಲೇ ಅಕ್ಕಿ ಖರೀದಿಸಲು ಸರ್ಕಾರ ತೀರ್ಮಾನಿಸಿದೆ.




