Ad imageAd image

ಆರ್ ಎಂ ಪಿ ವೈದ್ಯ ವೀರೇಶ್ ನೀಡಿದ ಚಿಕಿತ್ಸೆಯ ಅಡ್ಡ ಪರಿಣಾಮದಿಂದ ವ್ಯಕ್ತಿ ಸಾವು, ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ?

Bharath Vaibhav
ಆರ್ ಎಂ ಪಿ ವೈದ್ಯ ವೀರೇಶ್ ನೀಡಿದ ಚಿಕಿತ್ಸೆಯ ಅಡ್ಡ ಪರಿಣಾಮದಿಂದ ವ್ಯಕ್ತಿ ಸಾವು, ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ?
WhatsApp Group Join Now
Telegram Group Join Now

ಮೊಳಕಾಲ್ಮುರು: ತಾಲೂಕಿನಾದ್ಯಂತ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ ಅಮಾಯಕರ ಪ್ರಾಣ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮತ್ತು ಹಸಿರು ಸೇನೆ ಅಧ್ಯಕ್ಷರಾದ ಮಲ್ಲಹಳ್ಳಿ ರವಿಕುಮಾರ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯ ಕಾಯಿಲೆಗಳಿಗೆ ತಪಾಸಣೆಗೆ ಬರುವ ರೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚಾದ ಮಾತ್ರೆ ಇಂಜೆಕ್ಷನ್ ನೀಡಿ ಅವರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಇನ್ನಷ್ಟು ಅನಾರೋಗ್ಯಕ್ಕೆ ಪೀಡಿತರಾಗನ್ನಾಗಿ ಮಾಡುವ ಕೆಲಸ ನಕಲಿ ವೈದ್ಯರಿಂದ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಪಡೆಯದ ಕೆಲವು ಕೋರ್ಸ್ ಗಳನ್ನು ಓದಿಕೊಂಡು ಕ್ಲಿನಿಕ್ ತೆರೆದುರುವ ಅನೇಕ ನಕಲಿ ಡಾಕ್ಟರ್ ಗಳು ಇದ್ದರೆ ಅವರ ಮೇಲೆ ಜಿಲ್ಲಾಡಳಿತ ತಾಲೂಕು ಆಡಳಿತ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಅದಕ್ಕೆ ಉದಾಹರಣೆ ಎಂಬಂತೆ ನೆರೆಯ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ನುಂಕನಹಳ್ಳಿ ಗ್ರಾಮದ ಮಾರಣ್ಣ 40 ವರ್ಷ ತುಂಬಿರುವ ವ್ಯಕ್ತಿಗೆ ತಾಲೂಕಿನ ಸಿದ್ದನಕೋಟೆ ಗ್ರಾಮದಲ್ಲಿರುವ ಆರ್ ಎಮ್ ಪಿ ವೈದ್ಯ ವೀರೇಶ್ ಅವರಿಂದ ಚಿಕಿತ್ಸೆ ಪಡೆದಿದ್ದರೂ. ವೈದ್ಯರು ಇಂಜೆಕ್ಷನ್ ನೀಡಿದ ಜಾಗದಲ್ಲಿ ಊತ ಬಂದಿದ್ದು ಕಡಿಮೆಯಾಗದ ಪರಿಣಾಮ ವೀರೇಶ್ ಬಳೆ ಮತ್ತೆ ಹೋದಾಗ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತದನಂತರ ವಿಮ್ಸ್ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಗುರುವಾರ ಬೆಳಿಗ್ಗೆ ಮಾರಣ ಮೃತಪಟ್ಟಿದ್ದಾರೆ ಎಂದು ತಿಳಿದ ಬಂದಿದೆ

ಸಾವಿಗೆ ಆರ್‌ಎಮ್‌ಪಿ ವೈದ್ಯ ವೀರೇಶ್ ನೀಡಿರುವ ಚಿಕಿತ್ಸೆ ಅಡ್ಡಿ ಪರಿಣಾಮ ಕಾರಣ ಎಂದು ಸಂಬಂಧಿಕರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮಾಡಲಾಗುತ್ತಿದೆ ಎಂದು ಪಿಎಸ್ಐ ಪಾಂಡುರಂಗಪ್ಪ ತಿಳಿಸಿದರು.

ಈಗಲಾದರೂ ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ವರದಿ : ಪಿಎಂ ಗಂಗಾಧರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!