ಅರಭಾವಿ: ಮತಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯ ಕಾಮಗಾರಿಯ ಕುರಿತು ಇಂದು ಅರಭಾವಿ ಮತ ಕ್ಷೇತ್ರದ ಶಾಸಕರಾದ ಶ್ರೀ ಬಾಲಚಂದ್ರ ಲ ಜಾರಕಿಹೊಳಿಯವರಿಂದ ಕುಡಿಯುವ ನೀರಿನ ಯೋಜನೆಗೆ ಭೂಮಿ ಪೂಜಾ ಕಾರ್ಯಕ್ರಮ ಉದ್ಘಾಟನೆ.
ಮೂಡಲಗಿ ತಾಲೂಕಿನ ಅರಭಾವಿ,ಕಲ್ಲೋಳಿ, ನಾಗನೂರು ಪಟ್ಟಣ ಪಂಚಾಯತ್ ಮತ್ತು ಮೂಡಲಗಿ ಪುರಸಭೆಯ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಯೋಜನೆ ಕಲ್ಪಿಸುವ 140.69 ಕೋಟಿ ರೂಪಾಯಿ ಮೊತ್ತದ ಅಮೃತ್ 2.0 ಕಾಮಗಾರಿಗೆ ಶಂಕು ಸ್ಥಾಪನೆ. ಇದರ ಕುರಿತು ಶ್ರೀ ಬಾಲಚಂದ್ರ ಜಾರಕಿಹೊಳಿಯವರು ಅನೇಕ ನೀರಾವರಿ ಯೋಜನೆಗಳ ಮಾಹಿತಿಯನ್ನು ಕೊಟ್ಟು ಅದರಲ್ಲಿ ಮಿಷನ್ 2.0 ಇದರ ಕುರಿತಾಗಿ ಮಾಹಿತಿಯನ್ನು ನೀಡಿ ಅರಭಾವಿ ಮತಕ್ಷೇತ್ರದ ಜನರಿಗೆ ಅನೇಕ ರೀತಿಯಾದ ಉಪಯುಕ್ತವಾದ ನೀರಾವರಿ ಯೋಜನೆ ಇದಾಗಿದ್ದು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷರು ಖುಷ್ರಾದ್ ಅನ್ವರ್ ನದಾಫ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಭೀಮವ್ವ ಪೂಜಾರಿ.ಅರಭಾವಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಸಂಜು ಮಾದರ್ ಉಪಾಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಗಂಗನ್ನವರ ಕಲ್ಲೋಳ್ಳಿ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಮಾಯವ್ವಾ ಬಸ್ವಂತ್ ದಾಸನವರ್ ಉಪಾಧ್ಯಕ್ಷರಾದ ಮೇಘ ಬಸವರಾಜ್ ಖಾನಾಪುರ್. ನಾಗನೂರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರವ್ವ ಮಲಗೌಡ್ ಯಲಗಾವಿ ಉಪಾಧ್ಯಕ್ಷರಾದ ಸುಭಾಷ್ ಕಾತನ್ನವರ್ ಅದೇ ರೀತಿಯಾಗಿ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ (PDO) ಮೂಡಲಗಿಯ :ಶ್ರೀ ತುಕಾರಾಮಾದಾರ್ ನಾಗನೂರು ಪಂಚಾಯತಿಯ: ಶ್ರೀ ಕುಮಾರೇಶ್ ಬಾಳಾ ನಾಯಕ ಕಲ್ಲೋಳಿಯ: ಶ್ರೀ ಚಿದಾನಂದ ಮುಗಳಕೋಡ ಅರಭಾವಿಯ: ಶ್ರೀ ವಿನಾಯಕ್ ಬಬಲೇಶ್ವರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಊರಿನ ಅನೇಕ ಗಣ್ಯಮಾನ್ಯರು ಶ್ರೀ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸನ್ಮಾನವನ್ನು ಮಾಡಲಾಯಿತು.
ವರದಿ : ರಾಜು ಮುಂಡೆ




