ಪಾವಗಡ: ಪಾವಗಡ ಪಟ್ಟಣದ ಬಾಪೂಜಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾಲೇಜಿನ ಸೇವಾ ನಿವೃತ್ತಿ ಹೊಂದಿರುವ ಶ್ರೀ ಮುದ್ದಯ್ಯ ಪ್ರಾಚಾರ್ಯರವರಿಗೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆ ವತಿಯಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಪೀಠಾಧ್ಯಕ್ಷರು ನಿಡಗಲ್ಲು ವಾಲ್ಮೀಕಿ ಆಶ್ರಮ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ನೆಚ್ಚಿನ ಪ್ರಾಚಾರ್ಯರಾಗಿ ಸೇವಾ ಸಲ್ಲಿಸಿ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸರ್ಕಾರಿ ನೌಕರ ಸಂಘದ ವಿವಿಧ ಪದವಿಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀ ಮುದ್ದಯ್ಯ ಅವರ ನಿವೃತ್ತಿ ಜೀವನ ಸುಖ ಶಾಂತಿ ಸಮೃದ್ಧಿ ಯಿಂದ ಕೂಡಿರಲೆಂದು ಆಶೀರ್ವದಿಸಿದರು
ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕರು ಮಾಜಿ ಶಾಸಕರಾದ ಉಗ್ರ ನರಸಿಂಹಪ್ಪನವರು ಮಾತನಾಡಿ 1991ರಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ನಮ್ಮ ಸಂಸ್ಥೆಯಲ್ಲಿ ಸೇವೆ ಪ್ರಾರಂಭಿಸಿ 1993 ಸಂಸ್ಥೆಯ ಪ್ರಾಚಾರ್ಯರಾಗಿ ರಿಂದ ಮಾರ್ಚ್ 2024 ಯವರಗೆ ತಮ್ಮ ಪ್ರಾಚಾರ್ಯರ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ ಸಂಸ್ಥೆಯಲ್ಲಿ ಕೆಲ ಬಡ ವಿದ್ಯಾರ್ಥಿಗಳಿಗೆ ಅವರೇ ವಿದ್ಯಾಭ್ಯಾಸದ ಶುಲ್ಕ ಕಟ್ಟಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ಮಾಡಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿರುವ ಶ್ರೀ ಮುದ್ದಯ್ಯ ಸರ್ ಮಾತನಾಡಿ ಬಡತನದ ಹುಟ್ಟಿ ಬೆಳೆದು ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿ ಬಂದಿರುವ ನಾನು ಬಾಪೂಜಿ ಕಾಲೇಜು ವಿದ್ಯಾಸಂಸ್ಥೆಯಲ್ಲಿ 28 ವರ್ಷಗಳು ಪ್ರಾಮಾಣಿಕತೆಯಿಂದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದೇನೆ ಸಂಸ್ಥೆ ಉಳಿಸಲು ನನ್ನ ಕೈಲಾಗುವ ಅಳಿಲು ಸೇವೆಯನ್ನು ಸಂಸ್ಥೆಗೆ ಮಾಡಿದ್ದೇನೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶ್ರೀ ಮುದ್ದಯ್ಯ ಹಾಗೂ ಪತ್ನಿ ಲಕ್ಷ್ಮಿ ದೇವಿ ಅವರನ್ನು ಕಾಲೇಜು ಸಿಬ್ಬಂದಿ ವರ್ಗದವರು ಹಳೇ ವಿದ್ಯಾರ್ಥಿಗಳು ಹಾಗೂ ಬಾಪೂಜಿ ವಿದ್ಯಾ ಸಂಸ್ಥೆ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಬಾಪೂಜಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ಕೋಮಲ. ಮುಖಂಡರುಗಳಾದ ಶ್ರೀ ಲೋಕೇಶ್ ಪಾಳೇಗಾರ್. ಬಸವಲಿಂಗಪ್ಪ. ರಾಮಕೃಷ್ಣಪ್ಪ. ಗಂಗಾಧರ್. ಶಿವಣ್ಣ. ಕೃಷ್ಣಮೂರ್ತಿ. ನರಸಿಂಹಮೂರ್ತಿ. ಮಾಗಡಿ ರಂಗಯ್ಯ. ಬಾಪೂಜಿ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಮುಂತಾದ ಗಣ್ಯರು ಭಾಗವಹಿಸಿದ್ದರು
ವರದಿ: ಶಿವಾನಂದ