Ad imageAd image

ಎನ್ ಆರ್ ಜಿ ನೆರಗಾ ದಲ್ಲಿ ಕೂಲಿಲ್ಲದೇ ಕಾರ್ಮಿಕರು ಪ್ರತಿಭಟನೆ

Bharath Vaibhav
ಎನ್ ಆರ್ ಜಿ ನೆರಗಾ ದಲ್ಲಿ ಕೂಲಿಲ್ಲದೇ ಕಾರ್ಮಿಕರು ಪ್ರತಿಭಟನೆ
WhatsApp Group Join Now
Telegram Group Join Now

ಪಾವಗಡ ತಾಲ್ಲೂಕಿನ ಕಡಪಲಕೆರೆ ಗ್ರಾಮದ ಕೂಲಿ ಕಾರ್ಮಿಕರು ಗ್ರಾಮ ಪಂಚಾಯಿತಿಯ ಎನ್ ಆರ್ ಜಿ ನೆರಗಾ ದಲ್ಲಿ ಕೂಲಿಲ್ಲದೇ ಕಾರ್ಮಿಕರು ಪ್ರತಿಭಟನೆ

ತುಮಕೂರು : ಪಾವಗಡ ತಾಲೂಕಿನಲ್ಲಿ ದಿನಾಂಕ, 20/02/25 ಗುರುವಾರ ಸಂಜೆ 4:00ಗೆ ಸಮಯದಲ್ಲಿ ಕೋಟಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಲಕೆರೆ ಗ್ರಾಮದ ಕೂಲಿ ಕಾರ್ಮಿಕರು ಎನರ್ಜಿ ನೆರಗಾದಲ್ಲಿ ಕೂಲಿಲ್ಲದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಕಚೇರಿ ಮುಂದೆ ಸುಮಾರು ಜನ ಕೂಲಿಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ ಸ್ಥಳೀಯ ಗ್ರಾಮದ ಕೂಲಿ ಕಾರ್ಮಿಕ ಮಾತನಾಡಿ ಕಡಪಲಕೆರೆ ಗ್ರಾಮದಲ್ಲಿ ಎನ್ ಆರ್ ಜಿ ನರೇಗಾ ಕಾಮಗಾರಿಗಳು ಜೆಸಿಪಿ ಕಡೆಯಿಂದ ಕಾಮಗಾರಿಗಳು ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಊರಿನಲ್ಲಿರುವ ಕೆಲವರು ಪ್ರಭಾವಿ ನಾಯಕರುಗಳು ನೆರಗ ಕಾಮಗಾರಿಗಳು ಕೆಲಸ ಮಾಡುತ್ತಿದ್ದಾರೆ.

 

ಆದರೆ ಕೂಲಿ ಕಾರ್ಮಿಕರು ಕೆಲಸ ಕೇಳಿದರೆ ಕೊಡುತ್ತಿಲ್ಲ ಮತ್ತು ಯಾವುದಾದರೂ ಕೂಲಿ ಕಾರ್ಮಿಕರು ನೆರಗದಲ್ಲಿ ಕೆಲಸ ಮಾಡಿದರೆ ಅದನ್ನು ತಡೆದು ಕೂಲಿ ಕಾರ್ಮಿಕರ ಖಾತೆಗಳಿಗೆ ಹಣ ಜಮಾ ಮಾಡದಂಗೆ ನಿಲ್ಲಿಸುತ್ತಾರೆ ಅಧಿಕಾರಿಗಳು ಜೆಸಿಬಿ ಕಡೆಯಿಂದ ಮಾಡಿಸಿರ್ತಕ್ಕಂತವರ ಪ್ರಭಾವಿಗಳು ಹತ್ತಿರ ಶಾಮಿಯಲ್ಲಾ ಆಗಿರುತ್ತಾರೆ ಎಂದು ಕಡಪಲಕೆರೆ ಗ್ರಾಮದ ಕೂಲಿ ಕಾರ್ಮಿಕರು ಆರೋಪ ಈ ವೇಳೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದವರು. ದಲಿತ ಪರ ಒಕ್ಕೂಟ ಅಧ್ಯಕ್ಷರು ಹನುಮಂತ್ರಾಯಪ್ಪ. ಮಹಾ ಆದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರು. ಕೃಷ್ಣಮೂರ್ತಿ ಇನ್ನೂ ಕಡಪಲ ಕೆರೆ ಗ್ರಾಮದ ಕೂಲಿ ಕಾರ್ಮಿಕರು ಇದ್ದರು.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!