ದೈಹಿಕ ಸಂಬಂಧ ಇದ್ದ ಮಾತ್ರಕ್ಕೆ ಅದು ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ :ಹೈಕೋರ್ಟ್‌ 

Bharath Vaibhav
ದೈಹಿಕ ಸಂಬಂಧ ಇದ್ದ ಮಾತ್ರಕ್ಕೆ ಅದು ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ :ಹೈಕೋರ್ಟ್‌ 
LAW
WhatsApp Group Join Now
Telegram Group Join Now

ನವದೆಹಲಿ: ಅಪ್ರಾಪ್ತ ಯುವತಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟ ಪೋಕ್ಸೊ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಆರೋಪಿಯನ್ನು ದೆಹಲಿ ಹೈಕೋರ್ಟ್‌ ಖುಲಾಸೆಗೊಳಿಸಿದೆ. ಈ ದೈಹಿಕ ಸಂಬಂಧ ಇದ್ದ ಮಾತ್ರಕ್ಕೆ ಅದು ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ ದ್ವಿಸದಸ್ಯ ಪೀಠ, ಪ್ರಕರಣದಲ್ಲಿ ಸಂತ್ರಸ್ತೆ ನೀಡಿರುವ ಹೇಳಿಕೆ ಪೋಕ್ಸೋ ಸಾಬೀತುಪಡಿಸುವ ಯಾವುದೇ ಲೈಂಗಿಕ ಸಂಭೋಗವಾಗಲಿ ಅಥವಾ ಲೈಂಗಿಕ ದೌರ್ಜನ್ಯವನ್ನು ಸೂಚಿಸುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂತ್ರಸ್ತೆ ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡುವ ವೇಳೆ ದೈಹಿಕ ಸಂಬಂಧ ಎಂಬ ಪದ ಬಳಸಿದ್ದು,ಆಕೆ ಇದನ್ನು ಹೇಗೆ ಅರ್ಥೈಸಿದ್ದಾಳೆ ಎಂದು ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.

ಈ ಪೋಕ್ಸೋ ಕಾಯ್ದೆಯಲ್ಲಿ ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದು, ಒಪ್ಪಿಗೆ ಅಪ್ರಸ್ತುತವಾಗಿದ್ದರೂ ಲೈಂಗಿಕ ದೌರ್ಜನ್ಯ ನಡೆಯದೇ ಇದ್ದಾಗ ದೈಹಿಕ ಸಂಬಂಧ ಎಂಬ ಪದವನ್ನು ಲೈಂಗಿಕ ಸಂಭೋಗ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!