ಕೂಸಿನ ಮನೆ ಕೆಲಸವನ್ನು ಭಕ್ತಿಪೂರ್ವಕವಾಗಿ ಮಾಡಿ : ಇಓ ದೇಶಪಾಂಡೆ

Bharath Vaibhav
ಕೂಸಿನ ಮನೆ ಕೆಲಸವನ್ನು ಭಕ್ತಿಪೂರ್ವಕವಾಗಿ ಮಾಡಿ : ಇಓ ದೇಶಪಾಂಡೆ
WhatsApp Group Join Now
Telegram Group Join Now

ಬಾಗಲಕೋಟೆ : ಕೂಸಿನ ಮನೆಯ ಕೆಲಸವನ್ನು ಭಕ್ತಿಪೂರ್ವಕವಾಗಿ ಮಾಡಿದ್ದರೇ ಈ  ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ತಿಳಿಸಿದರು.

ಹುನಗುಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೂಸಿನಮನೆ ಆರೈಕೆದಾರರಿಗೆ ಏಳು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿ ಎಂದು ಕೂಸಿನಮನೆ ಯೋಜನೆ ತರಲಾಗಿದ್ದು, ಕೂಲಿ ಕಾರ್ಮಿಕರ ಮಕ್ಕಳನ್ನು ನಿಮ್ಮ ಮಕ್ಕಳಂತೆ ಪಾಲನೆ, ಪೋಷಣೆ ಮಾಡಿದ್ದೇ ಮಾತ್ರ ಈ ಯೋಜನೆಯ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.

ಇನ್ನು ಅಮರಾವತಿ ಗ್ರಾಮ ಪಂಚಾಯಿತಿಗೆ ಕ್ಷೇತ್ರ ಭೇಟಿ ಮಾಡಿ  ಕೂಸಿನ ಮನೆ ಕೇಂದ್ರದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಸ್ಟರ್ ಟ್ರೈನರ್ಸ್ಗಗಳಾದ, ಶಿವಲೀಲಾ ಸರಗಣಾಚಾರಿ ಮಠ, ಬಸವರಾಜ ಕೊಪ್ಪದ, ಎಸ್ಐಆರ್ ಡಿ ಡಿಟಿಶಿ ಬಸವರಾಜ ಬೇವೂರ, ಇಎಸ್ ಟಿ ಪ್ರಕಾಶ್ ಬಸರಿಗಿಡದ, ಗ್ರಾಪಂ ಕಾರ್ಯದರ್ಶಿ ಸಂಗಯ್ಯ ಹಿರೇಮಠ, ಗ್ರಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!