ಹೊಸ ವರ್ಷಕ್ಕೆ ಕ್ಷಣ ಗಣನೆ ಪೊಲೀಸ್ ಆಯುಕ್ತ ಎ‌ನ್.ಶಶಿಕುಮಾರ್ ರಿಂದ ರೌಢಿ ಪರೇಡ್

Bharath Vaibhav
ಹೊಸ ವರ್ಷಕ್ಕೆ ಕ್ಷಣ ಗಣನೆ ಪೊಲೀಸ್ ಆಯುಕ್ತ  ಎ‌ನ್.ಶಶಿಕುಮಾರ್ ರಿಂದ ರೌಢಿ ಪರೇಡ್
WhatsApp Group Join Now
Telegram Group Join Now

ಹುಬ್ಬಳ್ಳಿ:ಹೊಸ ವರ್ಷಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎ‌ನ್.ಶಶಿಕುಮಾರ್ ರೌಢಿ ಪರೇಡ್ ಮಾಡಿದ್ದಾರೆ.

ಇಲ್ಲಿನ ಕಾರವಾರ ರಸ್ತೆಯಲ್ಲಿ ಹು-ಧಾ ಮಹಾನಗರದ ವ್ಯಾಪ್ತಿಯಲ್ಲಿನ ರೌಢಿಶೀಟರ್ ಗಳನ್ನು ಕರೆದು, ವರ್ಷಾಂತ್ಯದ ವೇಳೆ ಯಾವುದೇ ಅಪರಾಧ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದರು. ಮುಂದೆ ಅಪರಾಧ ಕೃತ್ಯಗಳನ್ನು ಕೈಬಿಟ್ಟು ಉತ್ತಮ ಬದುಕು ನಡೆಸುವಂತೆ ಬುದ್ದಿವಾದ ಹೇಳಿದ್ದಾರೆ.

ರೌಢಿಶೀಟರ್’ಗೆ ಅಂಬೇಡ್ಕರ್ ಬಗ್ಗೆ ಪಾಠ ಮಾಡಿದ ಕಮಿಷನರ್: ರೌಡಿಶೀಟರ್ ಗಳ ಪರೇಡ್ ವೇಳೆ ಕೊಲೆ ಆರೋಪಿಗೆ ಕಮಿಷನರ್ ಕ್ಲಾಸ್ ತೆಗೆದುಕೊಂಡಿದ್ದಾರೆ‌. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮದನ್ ಮೇಲೆ ಹಲವು ಪ್ರಕರಣಗಳಿವೆ. ಇಂದು ನಡೆದ ರೌಢಿಶೀಟರ್ ಪರೇಡ್ ವೇಳೆ ಅಂಬೇಡ್ಕರ್ ಭಾವಚಿತ್ರವಿರುವ ಪೆನ್ ಹಾಕಿಕೊಂಡು ಬಂದಿದ್ದ, ಇದನ್ನು ಗಮನಿಸಿದ ಕಮಿಷನರ್ ಅಂಬೇಡ್ಕರ್ ಬಗ್ಗೆ ಪಾಠ ಮಾಡಿದ್ದಾರೆ.

ಕೊಲೆ ಆರೋಪಿಗಳು ಎದೆಗೆ ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಇನ್ನೂ ನಮ್ಮ ದೇಶಕ್ಕೆ ಬಂದಿಲ್ಲ. ಅಂಬೇಡ್ಕರ್ ಭಾವಚಿತ್ರ ಹಾಕಿಕೊಂಡು ಓಡಾಡೋದಲ್ಲಾ ಅವರ ತತ್ವ ಸಿದ್ದಾಂತಗಳ ಬಗ್ಗೆ ತಿಳಿದುಕೊಂಡು ಬಾ ಎಂದು ಪಾಠ ನೀಡಿದ್ದಾರೆ.

ಮಾಲೆ ಹಾಕಿದ್ದೀಯಾ ಬದಲಾಗು: ಇದೇ ವೇಳೆ ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಕೆಲವು ರೌಢಿಶೀಟರ್ ಗಳು ಅಯ್ಯಪ್ಪ ಮಾಲೆಯನ್ನು ಹಾಕಿಕೊಂಡು ಬಂದಿದ್ದರು. ಈ ವೇಳೆ ರೌಢಿಶೀಟರ್’ಗೆ ಎನ್.ಶಶಿಕುಮಾರ್ ಮಾಲೆ ಹಾಕಿದ್ದೀಯಾ ಬದಲಾಗು ಎಂದು ಬುದ್ದಿವಾದ ಹೇಳಿದರು.

ಶಾಂತಿಯುತ ಹೊಸ ವರ್ಷ ಆಚರಣೆಗೆ ಕರೆ: ವರ್ಷಾಂತ್ಯದ ಸಂದರ್ಭದಲ್ಲಿ ಅವಳಿನಗರದ ನಾಗರಿಕರು ಶಾಂತಿಯುತ ಸಂಭ್ರಮಾಚರಣೆ ಮಾಡಬೇಕೆಂದು ಅನೇಕ ಕ್ರಮ ಕೈಗೊಂಡಿದ್ದೇವೆ. ಅದರಂತೆ ಜನರು ಕೂಡಾ ಸಹಕಾರ ನೀಡಬೇಕೆಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಸಿಆರ್ ಗ್ರೌಂಡ್’ನಲ್ಲಿ ರೌಢಿ ಪರೇಡ್ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಅವಳಿನಗರದಲ್ಲಿ 1288 ರೌಢಿಶೀಟರ್’ಗಳಿದ್ದು, ಇದರಲ್ಲಿ 820 ಹಾಜರಾಗಿದ್ದಾರೆ. ಅವರ ಅಪರಾಧ ಚಟುವಟಿಕೆ ಮತ್ತು ಕೇಸ್ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಅವರಿಗೆ ಉತ್ತಮ ರೀತಿಯಲ್ಲಿ ಇರಬೇಕು. ಮುಖ್ಯ ವಾಹಿನಿಗೆ ಬರಬೇಕು ಎಂದು ಬುದ್ದಿವಾದ ಹೇಳಲಾಗಿದೆ ಎಂದರು.

ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಆ್ಯಕ್ಟಿವ್ ಇರುವ ರೌಢಿಶೀಟರ್ ಮೇಲೆ ಗಡಿಪಾರಿಗೆ ಸೂಚನೆ ಕೊಟ್ಟಿದ್ದೇವೆ. ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾವಳಿ ಪಾಲನೆ ಮಾಡಬೇಕು ಎಂದರು.

ಈಗಾಗಲೇ ಶಾಂತಿಯುತ ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ಅವಳಿನಗರದ ಪ್ರಮುಖ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. 2000 ಸಿಬ್ಬಂದಿ ನೇಮಕ ಮಾಡಲಾಗಿದೆ. ಸಾರ್ವಜನಿಕರು ಎಲ್ಲಾದರೂ ಉಲ್ಲಂಘನೆ ಆದಲ್ಲಿ 112 ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದರು.

ಉಳಿದಂತೆ ಅಧಿಕಾರಿಗಳಿಗೆ ಟ್ರಂಕ್ ಆ್ಯಂಡ್ ಡ್ರೈವ್ ಕೇಸ್ ಮಾಡಲು ಸೂಚನೆ ಕೊಟ್ಟಿದ್ದೇವೆ. ಯುವಕರು ಬೇರೆಡೆಯಿಂದ ನಗರಕ್ಕೆ ಬಂದು ಹೊಸ ವರ್ಷ ಆಚರಣೆ ಮಾಡುವ ಯೋಚನೆಯಲ್ಲಿರುತ್ತಾರೆ. ಹೀಗಾಗಿ ಹೆಚ್ಚಿನ ಕೇಸ್ ಹಾಕಲು ತಿಳಿಸಲಾಗಿದೆ ಎಂದರು.

ಡಿಜೆಗೆ ಅವಕಾಶವಿಲ್ಲ: ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಡಿಜೆಗೆ ಅನುಮತಿಯಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿಕರು ಆಚರಣೆ ಮಾಡಬೇಕು. ಅದನ್ನು ಹೊರತುಪಡಿಸಿ ಯಾವುದೇ ವಿಶೇಷ ಅನುಮತಿಗಳಿಲ್ಲ ಎಂದರು‌.

ವರದಿ:ಸುಧೀರ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!