ಸೃಷ್ಟಿಯನ್ನೇ ಮರೆತ ಸೃಷ್ಟಿ

Bharath Vaibhav
ಸೃಷ್ಟಿಯನ್ನೇ ಮರೆತ ಸೃಷ್ಟಿ
WhatsApp Group Join Now
Telegram Group Join Now

ಭಾರತ್ ವೈಭವ್ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯ ಪುಟ್ಟ ಕಥೆ

“ಸೃಷ್ಟಿಯನ್ನೇ ಮರೆತ ಸೃಷ್ಟಿ”

ಅದೆಷ್ಟು ಪಾಪ ಮಾಡಿ ಹುಟ್ಟಿದವಳೋ ಅವಳು ! ಬಹುಶಃ ಹಿಂದಿನ ಜನ್ಮದ ಕರ್ಮಫಲವು ಏನೋ ….. ಛೇ ಹಾಗೇನು ಆಗಿರಲಿಕ್ಕಿಲ್ಲ, ಇಷ್ಟು ಜಾಗತೀಕರಣಕ್ಕೆ ಒಳಗೊಂಡ ಈ ಜಗತ್ತು ಇದನ್ನೆಲ್ಲವನ್ನು ನಂಬುವುದೇ ಇಲ್ಲ ಅಂದಿನ ಜನ್ಮದಲ್ಲೇನು ಪಾಪ ಮಾಡುವರೋ ಅಂದೇ ಅವರ ಕೊನೆ ಉಸಿರು ಮುಗಿಯುವಷ್ಟರಲ್ಲಿ ಅನುಭವಿಸುವರು ಎಂಬುದು ಈಗಿನವರ ಮಾತು…….

ಅದೆಷ್ಟೇ ಜಾಗತೀಕರಣ ನಮ್ಮ ಮೇಲೆ ಪ್ರಭಾವ ಬೀರಿದ್ದರು ಸರಿಯೇ ನಮ್ಮತನವನ್ನು ನಾವು ಬಿಡಬಾರದು ಅಲ್ಲದೆ ಅದಕ್ಕೂ ಮಿಗಿಲಾಗಿ ತಾಯಿಯ ಪ್ರೀತಿ ಯಾವ ಕಾಲಕ್ಕೂ ಬದಲಾಗದ ವಿಶ್ವಾಸ ಆಕೆಯದು……ಹೌದು
ನಾವು ತಾಯಿಯನ್ನು ಎಷ್ಟು ಹೊಗಳಿದರು ಸಾಲದು ಪದಗಳಿಗೆ ನಿಲುಕದವಳು ಅವಳು ….
ತಾಯಿಯೇ ದೈವ ತಾಯಿಯೇ ಸೃಷ್ಟಿಕರ್ತೆ ಎಲ್ಲಾ!!!! ಅಂದಹಾಗೆ ಆಕೆಗೂ ಕೆಲವು ಜವಾಬ್ದಾರಿಗಳುಂಟು ಆಕೆ ತನ್ನ ಆಸೆಗಳನ್ನು ನುಂಗಿ ತನ್ನ ಮಕ್ಕಳನ್ನು ಕಷ್ಟಪಟ್ಟು ಸುಖದಲ್ಲಿ ಬೆಳೆಸುವವಳು ಆಕೆ…..
ನನಗೆ ಸ್ವಲ್ಪ ದಿನದ ಹಿಂದೆಯಿಂದ ಒಂದು ವಿಷಯ ಕಾಡುತ್ತಿದೆ ಹೀಗೂ ಇರಬಹುದಾ? ಹೀಗೂ ಇರುತ್ತಾರೆ; ಜನರು ಎನ್ನುವುದಕ್ಕೆ ತಕ್ಕ ಉದಾಹರಣೆ ಆಕೆ, “ಅಮ್ಮ” ಎನಿಸಿಕೊಂಡವಳು
ಬಹುಶಃ ನನಗನಿಸುತ್ತೆ ಆಕೆ ತಾಯಿ ಅಮ್ಮ ಎನ್ನುವ ಪದಗಳಿಗೆ ಸರಿ ಸಮಾನಳಲ್ಲ ಸೂಕ್ತವಲ್ಲ…….
ಮೊದಲ ಬಾರಿಗೆ ಆ ಮಗುವನ್ನು ಕಂಡಾಗ ಕರುಳು ಹಿಂಡುವಂತಹ ಅನುಭವ ಯಾರಿಗೂ ಆ ಪರಿಸ್ಥಿತಿ ಬರಬಾರದು, ನಮ್ಮ ಶತ್ರುಗಳಿಗೂ ಕೂಡ🫢…….

ನಾನಿನ್ನೂ ತಡ ಮಾಡದೆ ವಿಷಯಕ್ಕೆ ಬರ್ತೇನೆ :-
ಅದೊಂದು ಪುಟ್ಟ ಊರು ಮುದ್ದಾದ ಒಂದು ಕುಟುಂಬ ತಂದೆ ತಾಯಿ ಅವರಿಗೊಂದು ಆಗತಾನೆ ಜನಿಸಿದ ಹಸುಳೆ ಹೀಗೆಯೇ ಎಲ್ಲವೂ ಚಂದವಾಗಿ ನಡೆಯಬೇಕಾದರೆ…… ಬಿರುಗಾಳಿಯೊಂದು ಎರಗಿ  ಎಲ್ಲವನ್ನ ಸರ್ವನಾಶ ಮಾಡಿತು ಆ ಬಿರುಗಾಳಿ ಆ ತಾಯಿಯ ಬದುಕಲ್ಲಿ ಅಷ್ಟೇನೂ ಪರಿಣಾಮ ಬೀರಲಿಲ್ಲ…..ಆ ಮಗುವಿನ ನಗುವನ್ನು ಕಿತ್ತುಕೊಂಡಿದ್ದಷ್ಟೇ🫤!!!! ಆಗ ತಾನೇ ಜನಿಸಿದ ಮಗುವಿಗೆ ತಂದೆ ಪ್ರೀತಿ ಸಿಗಲಿಲ್ಲ ಕಾರಣ ಆ ಬಿರುಗಾಳಿ ಎತ್ತೋಯ್ದದ್ದು ಒಂದು ಜೀವ ಅದೇ ಆ ಮಗುವಿನ ತಂದೆ…….
ಅಂದ ಹಾಗೆ ಒಂದು ಮಗುವಿಗೆ ತಂದೆ-ತಾಯಿ ಇಬ್ಬರೂ ವಿಷಯ ಅದು ಹೆಚ್ಚಾಗಿ ಹೆಣ್ಣು ಮಗುವಿಗೆ ಎಂದರೆ ತಾಯಿಯೇ ಅವಶ್ಯ ತಂದೆ ಇಲ್ಲದ ಸಮಯದಲ್ಲಿ ,ಆ ಮಗುವಿಗೆ ತಾಯಿ ,,,ತಂದೆ ಸ್ಥಾನ ತುಂಬಬೇಕು✨…… ಅಂತಹದರಲ್ಲಿ ಇಲ್ಲೊಂದು ಘಟನೆ ಅತೀ ಚಿಕ್ಕ ವಯಸ್ಸಿನಲ್ಲೇ🫢 ವಿಧವೆಯಾದ ಆಕೆ…. ತನ್ನ ಕನಸುಗಳೆಲ್ಲ ಕಮರುವ ಕ್ಷಣ ಅದಾಗಿತ್ತು ಆದರೆ ನಾವಿಕನಿಲ್ಲದ ದೋಣಿಗೆ ಸೂತ್ರದಾರ ಸಿಕ್ಕಹಾಗೆ
ಹಾಗೆ ಬದುಕಲ್ಲು ಒಬ್ಬ ವ್ಯಕ್ತಿಯ ಆಗಮನ ಎಲ್ಲವೂ ಚೆನ್ನಾಗಿಯೇ ನಡೆದು ಆಕೆಯ ಬದುಕು, ಹಸನಾಗಿತ್ತು
ಇಲ್ಲೇ ಬಂದಿದ್ದು ನೋಡಿ…..!!!
ಮದುವೆಯಾಗಿ ಸುಖವಾಗಿದ್ದ ಅವಳು ಕೇವಲ ಆಕೆಯ ದಾರಿಯನ್ನ ಸುಗಮವಾಗಿಸಿಕೊಂಡು ಹೋದಳು, ಆದರೆ ತಾನು ಹೊತ್ತು ಹೆತ್ತ ಮಗಳಿಗೆ ಆಸರೆಯ ನೀಡಿದ ಆಕೆಯ ಬಾಳಿಗೆ ಮುಳ್ಳಾಗಿ ಹೋದಳು🫥…….
ತನ್ನ ಮಗುವನ್ನು ಆಕೆಯ ಸತ್ತ ಗಂಡನಮನೆಯಲ್ಲಿಯೇ ಬಿಟ್ಟು ಹೋದಳು
ತನಗೂ ಆಕೆಗೂ ಯಾವುದೇ ಸಂಬಂಧ ಇಲ್ಲವೆನ್ನುವ ಹಾಗೆ ತನ್ನದೇ ಆದ ಮುನ್ನುಡಿಯಾದ ಆ ಮಗುವನ್ನು ತೊರೆದೋದಳು….. ಏನು ಅರೆದ ಕಂದಮ್ಮ ಮಾತು ಬರೆದಿದ್ದರು ಕಣ್ಣಂಚಲ್ಲಿ ನೀರು, ತಾಯಿ ನನ್ನನ್ನು ಬಿಟ್ಟು ಹೋಗುತ್ತಿದ್ದಾಳೆಂಬ ವಿಷಯವು ತಿಳಿಯದಿರುವ ಹಸುಳೆ ಅದು ಎದೆ ಹಾಲು ಕುಡಿಯುವ ಸಮಯದಲ್ಲಿ ಬಾಟಲಿ ಹಾಲನ್ನು ರೂಢಿಯಾಗಿಸಿಕೊಂಡವಳು….. ಬೇರೆಯವರ ಮಕ್ಕಳ ತಾಯಿಯನ್ನು ನೋಡಿದಾಗ ಜೋರಾಗಿ ಅತ್ತವಳು…. ಕೈತುತ್ತು ನೀಡುವ ಕೈಗಳಿಗೆ ಬೇಡವಾದವಳು …..
ಭಯವಾದಾಗ ಗುಮ್ಮ ಬಂದನಿಸಿದಾಗ ತಾಯಿಯ ಸೆರಗನ್ನು ಹಿಡಿಯಬೇಕೆನಿಸಿದಾಗ ಕೈಗಳಿಗೆ ನೀಲುಕದಷ್ಟು ದೂರ ಹೋಗಿದ್ದಳು ಅಬ್ಬ !!!! ಹೇಗಾಗಿರಬೇಡ ಆ ಮಗುವಿಗೆ ಆಕೆಯ ಬಾಲ್ಯದಲ್ಲಿ ತಾಯಿಯ ಪ್ರೀತಿಯನ್ನ ಕಾಣದಿದ್ದ ನೆನಪುಗಳಾಗಿದ್ದವು …… ಎಲ್ಲ ಕಷ್ಟಗಳನ್ನು ಅನಾತೆಯಾಗಿ ಎದುರಿಸಿದವಳು…..

ಈಗ ಆ ಮಗುವಿಗೆ 14 ವರುಷ ತಾಯಿ ಎನಿಸಿಕೊಂಡವಳು ಒಮ್ಮೆಯೂ ನೋಡಲಿಕ್ಕೆ ಬರೆದಿದ್ದ ಕಾಲಗಳ ಇಷ್ಟು ದಿವಸ ಕಳೆದವಳು🥲…… ಹೌದು ಮೊನ್ನೆ ಒಂದು ಸಂಭ್ರಮದಲ್ಲಿ ಅವರು ಸುದೀರ್ಘ 14 ವರುಷಗಳ ನಂತರ ಮುಖಮುಖಿಯಾಗಿದ್ದರು ….. ಆ ಮಗು ಯಾರದು ಎಂಬುದು ಅರಿವಿದ್ದರೂ ಅರಿವಿಗೆ ಬಾರದಂತೆ ಇದ್ದವಳು ಆ ಮಹಾತಾಯಿ …… ಅದೆಂಥ ಕ್ರೂರಿ ತಾಯಿಯವಳು ಇಷ್ಟು ದಿನಗಳ ನಂತರ ತನ್ನ ಕರುಳ ಬಳ್ಳಿಯನ್ನು ಕಾಣುತ್ತಿದ್ದೇನೆಂಬ ಸ್ವಲ್ಪ  ಪ್ರೀತಿಯ ಮುತ್ತನ್ನು ನೀಡದೆ ತನ್ನ ಮಗುವಿಗೆ ವಂಚನೆ ಮಾಡಿದಳು…..
ಆ ಮಗು ಅಪ್ಪಿಕೊಳ್ಳಲು ಬಂದಾಗ🫂 …. ಆ ತಾಯಿಯ ತೋಳುಗಳು ಬೇರೆರಡು ಮಕ್ಕಳಿಗೆ ಮುಡುಪಾಗಿತ್ತು ….. ಇದನ್ನು ಕಂಡ ಕ್ಷಣ ಬದುಕಿರುವುದೇ ವ್ಯರ್ಥವೆನಿಸಿತು ಆ ಮಗುವಿಗೆ ….ಮನದಾಳದಲ್ಲಿ ಹಲವಾರು ಪ್ರಶ್ನೆಗಳ ಮೆರವಣಿಗೆಯೇ ನಡೆಯಿತು ….. ನಾನು ಯಾರು ? ಅವರಿಗೆ ನಾನೇನಗಬೇಕು ? ನೀನು ತಪ್ಪು ಮಾಡಿದ್ದೇನೆ ನನ್ನ ಜೊತೆ ಏಕೆ ನನ್ನ ತಾಯಿ ಇಲ್ಲ ಹೀಗೆ ಹಲವಾರು ಗೊಂದಲ….. ಕೊನೆಯದಾಗಿ ಆ ಮಗುವಿನ ಹೆಸರು ಸೃಷ್ಟಿಯೆಂದು
ವಿಧಿಯಾಟ  ಹೇಗಿದೆ ನೋಡಿ ಸೃಷ್ಟಿಯನ್ನು ಸೃಷ್ಟಿಸಿದ ಸೃಷ್ಟಿಕರ್ತರೆ ಆಕೆಯನ್ನು ತೊರೆದರು ಇಂದು ಆಕೆ ತಾಯಿಯಿದ್ದರು ತಬ್ಬಲಿಯಾಗಿಹಳು

ನನಗನಿಸಿದಷ್ಟೇ !!!! ತಾಯಿಯಾದವಳು ತನ್ನ ಜೀವನವನ್ನು ರೂಪಿಸಿಕೊಂಡಳು ನಿಜ ಆದರೆ ತನ್ನ ಮಗುವಿನ ಭವಿಷ್ಯದ ಬಗ್ಗೆ ಕಿಂಚಿತ್ತೂ ಚಿಂತಿಸಬೇಕಿತ್ತು  ಹಾಗೆಯೇ ಆ ಮಗುವಿಗೆ ಆಶ್ರಯಿಸಿ ನಿಲ್ಲಬೇಕಿತ್ತು!!!!!
“ಏಕಾಂಗಿಯ ಸಾಲುಗಳಿವು”

ಸುನಿತಾ ಅ ಗೋಕುಲ್
(ಬಿ ಎ ವಿದ್ಯಾರ್ಥಿನಿ ಧಾರವಾಡ)

ವರದಿ :ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!