ಜನವರಿ 06 ರಂದು ರೇಣುಕಯ್ಯ ಅವರಿಗೆ ಶ್ರದ್ಧಾಂಜಲಿ ಸಭೆ: ಮಸಾಲಾ ಜಯರಾಮ್

Bharath Vaibhav
ಜನವರಿ 06 ರಂದು ರೇಣುಕಯ್ಯ ಅವರಿಗೆ ಶ್ರದ್ಧಾಂಜಲಿ ಸಭೆ: ಮಸಾಲಾ ಜಯರಾಮ್
WhatsApp Group Join Now
Telegram Group Join Now

ತುರುವೇಕೆರೆ: ಇತ್ತೀಚೆಗೆ ನಿಧನರಾದ ಮಾಜಿ ಸೈನಿಕ, ಬಿಜೆಪಿ ಮಾಜಿ ಅಧ್ಯಕ್ಷ ದುಂಡ ರೇಣುಕಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಸಂತಾಪ ಸೂಚಕ ಸಭೆಯನ್ನು ಜನವರಿ 06 ರಂದು ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸಂತಾಪ ಸೂಚಕ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದುಂಡ ರೇಣುಕಯ್ಯ ಅವರು ಸೈನಿಕರಾಗಿ ದೇಶ ರಕ್ಷಣೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಂತರದಲ್ಲಿ ಭಾರತೀಯ ಜನತಾ ಪಕ್ಷದ ನಿಷ್ಠಾವಂತ, ಸಕ್ರಿಯ ಕಾರ್ಯಕರ್ತರಾಗಿ, ತಾಲೂಕು ಅಧ್ಯಕ್ಷರಾಗಿ, ಜಿಲ್ಲಾ ಘಟಕದಲ್ಲೂ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ತಮ್ಮದೇ ಆದ ಶಿಸ್ತುಬದ್ಧ ವ್ಯಕ್ತಿತ್ವದೊಂದಿಗೆ ಅವಿತರವಾಗಿ ದುಡಿದಿದ್ದಾರೆ. ಅಂತಹ ಹಿರಿಯರನ್ನು ಕಳೆದುಕೊಂಡು ಅನಾಥಭಾವ ಕಾಡುತ್ತಿದೆ ಎಂದು ವಿಷಾಧಿಸಿದರು.

ಪಕ್ಷದ ಹಿರಿಯರಾಗಿ, ನಮ್ಮೆಲ್ಲರ ಮಾರ್ಗದರ್ಶಕರಾಗಿ ಅಧ್ಯಕ್ಷರೆಂದೇ ಗುರುತಿಸಿಕೊಂಡಿದ್ದ ರೇಣುಕಯ್ಯ ಅವರ ನಿಧನ ನಮಗೆ ವೈಯಕ್ತಿಕವಾಗಿ, ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ದುಂಡ ರೇಣುಕಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾ ಅವರಿಗೆ ಪಕ್ಷದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿ ಅನೇಕ ಅಭಿಮಾನಿಗಳು, ಹಿತೈಷಿಗಳು ಪಕ್ಷಾತೀತವಾಗಿ ಇದ್ದಾರೆ. ಈ ನಿಟ್ಟಿನಲ್ಲಿ ಸಂತಾಪ ಸೂಚಕ ಸಭೆಯನ್ನು 2025 ರ ಜನವರಿ 06 ರಂದು ಸೋಮವಾರ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶ್ರದ್ದಾಂಜಲಿ ಸಭೆಗೆ ಪಕ್ಷಾತೀತವಾಗಿ ಹಾಗೂ ಪಕ್ಷದ ಎಲ್ಲರೂ ಆಗಮಿಸಿ ಅಗಲಿದ ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರೋಣ ಎಂದರು.

ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಬಿಜೆಪಿ ಮಾಜಿ ಅಧ್ಯಕ್ಷರಾದ ದುಂಡ ರೇಣುಕಯ್ಯ ಹಾಗೂ ನಮ್ಮದು ಎರಡು ದಶಕಗಳ ಸಂಬಂಧವಾಗಿದೆ. ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದರೂ ಸಹ ಎಲ್ಲಾ ಪಕ್ಷದವರೊಂದಿಗೆ ರೇಣುಕಯ್ಯನವರು ಅಪಾರ ವಿಶ್ವಾಸ ಗಳಿಸಿದ್ದರು. ರೇಣುಕಯ್ಯನವರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಬಹಳ ನೋವುಂಟು ಮಾಡಿದೆ. ರೇಣುಕಯ್ಯ ಕುಟುಂಬದ ಜೊತೆ ಭಾರತೀಯ ಜನತಾ ಪಕ್ಷ ಹಾಗೂ ಸಹಸ್ರಾರು ಕಾರ್ಯಕರ್ತರು ಎಂದಿಗೂ ಇರುತ್ತದೆ. ಪಕ್ಷಕ್ಕೆ ರೇಣುಕಯ್ಯ ಕೊಡುಗೆ ಅಪಾರವಾದುದಾಗಿದೆ. ರೇಣುಕಯ್ಯ ಅವರ ಆತ್ಮಕ್ಕೆ ಶಾಂತಿ ಕೋರಲು ಜನವರಿ 06 ರಂದು ಸಂತಾಪ ಸೂಚಕ ಸಭೆ ಏರ್ಪಡಿಸಿದ್ದು ಎಲ್ಲರೂ ಆಗಮಿಸಬೇಕೆಂದು ಕೋರಿದರು.

ಬಿಜೆಪಿ ಅಧ್ಯಕ್ಷ ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಡಿ.ಟಿ.ರಾಜಶೇಖರ್, ನಾಗಲಾಪುರ ಮಂಜುನಾಥ್, ಪ್ರಕಾಶ್ ಯಾದವ್, ಅರಳೀಕೆರೆ ಶಿವಯ್ಯ, ವಿ.ಬಿ.ಸುರೇಶ್, ಚೂಡಾಮಣಿ, ದಕ್ಷಿಣಾಮೂರ್ತಿ, ಹೇಮಚಂದ್ರ, ಜಗದೀಶ್, ಅಶ್ವಿನ್, ನವೀನ್ ಬಾಬು, ಚಂದ್ರೇಶ್, ರವಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್  

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!