ಕರ್ನಾಟಕದಲ್ಲಿ 4 ತಿಂಗಳಲ್ಲಿ 217 ಬಾಂತಿಯರ ಸಾವು

Bharath Vaibhav
ಕರ್ನಾಟಕದಲ್ಲಿ 4 ತಿಂಗಳಲ್ಲಿ 217 ಬಾಂತಿಯರ ಸಾವು
WhatsApp Group Join Now
Telegram Group Join Now

ಬೆಂಗಳೂರು : ಕರ್ನಾಟಕದಲ್ಲಿ ಈ ವರ್ಷದ ನವೆಂಬರ್‌ವರೆಗೆ 348 ಬಾಣಂತಿರಯ ಸಾವುಗಳು ದಾಖಲಾಗಿದ್ದು, ಆಗಸ್ಟ್‌ನಿಂದ ನವೆಂಬರ್‌ವರೆಗೆ ಕೇವಲ ನಾಲ್ಕು ತಿಂಗಳಲ್ಲಿ 217 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 179 ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು 38 ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸಿವೆ.

ಆಗಸ್ಟ್ ಮತ್ತು ನವೆಂಬರ್ ನಡುವೆ, ರಾಜ್ಯದಲ್ಲಿ ಪ್ರತಿ ತಿಂಗಳು 50 ಕ್ಕೂ ಹೆಚ್ಚು ಬಾಣಂತಿಯರ ಸಾವುಗಳಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಬಳ್ಳಾರಿಯಲ್ಲಿನ ಬಾಣಂತಿಯರ ಮರಣದ ನಂತರ ಐವಿ ದ್ರಾವಣ ಪರಿಶೀಲನೆಗೆ ಒಳಪಡಿಸಲಾಗಿದ್ದು, ಕಳಪೆ ಐವಿ ದ್ರಾವಣದಿಂದ ಸಾವುಗಳು ಸಂಭವಿಸಿರುವುದು ತಿಳಿದುಬಂದಿತ್ತು.

ಏತನ್ಮಧ್ಯೆ, ಪ್ರಸವಪೂರ್ವ ಅಥವಾ ಗರ್ಭಧಾರಣೆಯ ಸಂಬಂಧಿತ ಆರೈಕೆಗಾಗಿ ಮಹಿಳೆಯರಿಗೆ ವಾರಕ್ಕೆ ಮೂರು ಬಾರಿ ಭೇಟಿ ನೀಡುವಂತೆ ಸೂಚಿಸಲಾಗಿದೆ. ಆದರೆ ಅನೇಕರು ಹಾಜರಾಗುವುದಿಲ್ಲ. ಇದಲ್ಲದೆ, ಹೆಚ್ಚಿನ ಬಾಣಂತಿ ಮರಣಗಳು ರಕ್ತಹೀನತೆಯಿಂದ ಸಂಭವಿಸುತ್ತವೆ.ಮಹಿಳೆಯರು ಕಬ್ಬಿಣದ ಅಂಶದ ಗುಳಿಗೆಗಳು ಅಥವಾ ಚುಚ್ಚುಮದ್ದುಗಳಿಗಾಗಿ ವೈದ್ಯಕೀಯ ಆರೈಕೆಯನ್ನು ಪಡೆಯುವುದಿಲ್ಲ ಎಂದು ಸರ್ಕರಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!