ವಿಜಯಪುರ : ಬಸವನ ಬಾಗೇವಾಡಿಯಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತೋತ್ಸವದ ಅಂಗವಾಗಿ ಇಂದು ದಿನಾಂಕ ಫೆಬ್ರುವರಿ 21 2025 ಶುಕ್ರವಾರ ಸಮಯ ಮುಂಜಾನೆ 10 ಗಂಟೆಯಿಂದ ಶ್ರೀ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಭವನ ಕೆಎಸ್ಆರ್ಟಿಸಿ ಡಿಪೋ ಹತ್ತಿರ, ಬಸವನ ಬಾಗೇವಾಡಿಯಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಶ್ರೀ ಬಸವ ನಾಡಿನ ಸಮಸ್ತ ಬಂಜಾರ ಸಮಾಜ ಯುವಕರ ನೇತೃತ್ವದಲ್ಲಿ ನೆರವೇರಿಸಿದರು.
ಈ ಕಾರ್ಯಕ್ರಮದ ವಿಶೇಷ ಅತಿಥಿ ಕೇಂದ್ರ ಬಿಂದು ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ ಶ್ರೀ ಹನುಮಂತ ಮೇ. ಲಮಾಣಿ ಗಾಯಕರನ್ನು ಬಸವ ನಾಡಿನ ಬಂಜಾರ ಸಮಾಜದ ಸಮಸ್ತ ಯುವಕರಿಂದ ಅಭಿನಂದನ ಹಾಗೂ ಸನ್ಮಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ವಿನೋದ್ ಭಾವ ಪವಾರ್ ರೈತ ಸಂಘದ ತಾಲೂಕ ಅಧ್ಯಕ್ಷರು ಬಸವನ ಬಾಗೇವಾಡಿ, ಶ್ರೀ ಪ್ರವೀಣ್ ಹ ಪವಾರ್ ಬಂಜಾರ ಸಮಾಜ ಯುವ ನಾಯಕರು ಬಸವನ ಬಾಗೇವಾಡಿ, ಶ್ರೀ ಶಿವಾಜಿ ವಕೀಲರು, ಶ್ರೀ ಪಿಂಟು ಶಂ. ಲಮಾಣಿ, ಶ್ರೀ ರಾಜು ಶ್ರೀ ರಾಥೋಡ್, ಆನಂದ ದೇ. ಲಮಾಣಿ ಹಾಗೂ ಸಮಸ್ತ ಬಂಜಾರ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ವರದಿ:ಕೃಷ್ಣ ಎಚ್ ರಾಥೋಡ್




