ISR0ದ ಮಹತ್ವಾಕಾಂಕ್ಷೆಯ ಯೋಜನೆ SpaDeX ಯಶಸ್ವಿ ಉಡಾವಣೆ

Bharath Vaibhav
ISR0ದ ಮಹತ್ವಾಕಾಂಕ್ಷೆಯ ಯೋಜನೆ SpaDeX ಯಶಸ್ವಿ ಉಡಾವಣೆ
WhatsApp Group Join Now
Telegram Group Join Now

ಶ್ರೀಹರಿಕೋಟಾ : ISRO ಮಹತ್ವಾಕಾಂಕ್ಷೆಯ ಯೋಜನೆ ಡಾಕಿಂಗ್ ಪ್ರಯೋಗ ಮಾಡಲಿರುವ SpaDeX ಯಶಸ್ವಿ ಉಡಾವಣೆಯಾಗಿದೆ. ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದಇಂದು (ಡಿ.30) ರಾತ್ರಿ 10:00:15 ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ SpaDeX ಹೊತ್ತ PSLV-C60 ನಭಕ್ಕೆ ಹಾರಿದೆ.

ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಈ ಉಪಗ್ರಹಗಳನ್ನು ರಾಕೆಟ್ ಯಶಸ್ವಿಯಾಗಿ ಸೇರಿಸಬೇಕಿದ್ದು, ಆ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ತನ್ನ ಡಾಕಿಂಗ್ ಪ್ರಯೋಗ ನಡೆಸಲಿದೆ.

ಈ ದಿಕ್ಕಿನಲ್ಲಿ ಇದು ಭಾರತದ ಮೊದಲ ಹೆಜ್ಜೆಯಾಗಿದ್ದು, ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಮತ್ತು ಭವಿಷ್ಯದ ಅಂತರಗ್ರಹ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಲು ಭಾರತದ ಪಾಲಿಗೆ ನಿರ್ಣಾಯಕವಾಗಿದೆ.

ಈ SpaDeX ಕಾರ್ಯಾಚರಣೆ ಬಾಹ್ಯಾಕಾಶದಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಪ್ರದರ್ಶಿಸುವ ಗುರಿಯನ್ನು ಹೊಂದಿದೆ, ಈ ಕಾರ್ಯಾಚರಣೆಗಳಿಗೆ ಯಶಸ್ವಿಯಾದರೆ, ಭಾರತ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!