ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ರವಿ ಆಯ್ಕೆ

Bharath Vaibhav
ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ರವಿ ಆಯ್ಕೆ
WhatsApp Group Join Now
Telegram Group Join Now

ಚಾಮರಾಜನಗರ: ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಚುನಾವಣೆ ನೆಡೆಸಲಾಗಿದ್ದು 15ಸದ್ಯಸರು ಅವಿರೋದವಾಗಿ ಆಯ್ಕೆ ಆಗಿರುತಾರೆ.

ಆಯ್ಕೆಯಾದ 15ಸದ್ಯಸರುಗಳು ಸೇರಿ ಶ್ರೀ ಎಸ್. ರವಿ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಉಪಾಧ್ಯಕ್ಷರಾಗಿ , ಶ್ರೀ ವೈ. ವಿ. ಉಮಾಶಂಕರ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ , ಶ್ರೀ ರಾಜು ಖಜಾಂಚಿ ಮತ್ತು ಎಂ. ಸಿ. ಶ್ರೀಕಂಠ ಮೂರ್ತಿ ಜಿಲ್ಲಾ ಪ್ರತಿನಿಧಿಗಳಾಗಿ ಆವಿರೋಧವಾಗಿ ಆಯ್ಕೆಯಾಗಿದರೆ ಎಂದು ಚುನಾವಣಾಧಿಕಾರಿಯಾದ ಶ್ರೀ ಎನ್. ಜಿ. ಅಮೃತೇಶ್ವರ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರವಿ ಮಾತನಾಡಿ ನಮ್ಮನ್ನು ಆಯ್ಕೆ ಮಾಡಿದ್ದ ಸದ್ಯಸರುಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೆನೆ. ನಾವು ಮುಂದಿನ 5 ವರ್ಷಗಳ ಕಾಲ ಕೃಷಿ ಇಲಾಖೆ ಮತ್ತು ರೈತರಿಗೆ ಸಂಪರ್ಕ ಸೇತುವೆಯಾಗಿ ಇರುತೇವೆ ಸರ್ಕಾರದಿಂದ ಕೃಷಿ ಇಲಾಖೆಗೆ ಬರುವ ಸಾವಾಲಭ್ಯ ಗಳನ್ನು ಎಲ್ಲಾ ರೈತರಿಗೆ ಸಿಗುವಾಗ ಕೆಲಸ ಮಾಡುತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಗ್ರಾಮದ ರೈತ ಮುಖಂಡರುಗಳು ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!