ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾಗಿ ಡಿ ಹೆಚ್. ಪೂಜಾರಿ ನೇಮಕ

Bharath Vaibhav
ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾಗಿ ಡಿ ಹೆಚ್. ಪೂಜಾರಿ ನೇಮಕ
WhatsApp Group Join Now
Telegram Group Join Now

ಸಿಂಧನೂರು :ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ ಹೆಚ್. ಪೂಜಾರಿ ಕಳೆದ 30 ವರ್ಷಗಳಿಂದ ರೈತ ಕೂಲಿ ಕಾರ್ಮಿಕರಪರ ಮತ್ತು ದಲಿತ ಪರ ನಿರಂತರ ಹೋರಾಟದಲ್ಲಿ ತೊಡಗಿ ಸಮಾಜವಾದಿ ವೈಜ್ಞಾನಿಕ ಮೌಲ್ಯಗಳೊಂದಿಗೆ ಶೋಷಿತರ ಸ್ವಾಭಿಮಾನದ ಬದುಕಿಗಾಗಿ ನ್ಯಾಯ ನೀತಿ ಸತ್ಯಕ್ಕಾಗಿ ಅವಿತರವಾಗಿ ಶ್ರಮಿಸಿ ಸಮಾಜದಲ್ಲಿ ಭಾತೃತ್ವದ ಭಾವನೆಯನ್ನು ಮೂಡಿಸುತ್ತ ಅಸಮಾನತೆಯ ಸಮಾಜದಲ್ಲಿ ಸಮಾನತೆ ತರಲು ಕಷ್ಟಪಟ್ಟು ಕ್ರಾಂತಿಕಾರಿ ಆಲೋಚನೆಯೊಂದಿಗೆ ಕರ್ನಾಟಕ ರಾಜ್ಯದ್ಯಂತ ಭೂ ಚಳುವಳಿಗೆ ಮುಂಚೂಣಿ ನಾಯಕತ್ವ ಕೊಡುವುದರ ಮೂಲಕ ನೂರಾರು ಹೋರಾಟಗಳನ್ನು ರೂಪಿಸಿ ಯಶಸ್ವಿಗೆ ಕಾರಣರಾದ ಡಿ ಎಚ್ ಪೂಜಾರಿ ಅವರನ್ನು ಗುರುತಿಸಿ ಕರ್ನಾಟಕ ಸರ್ಕಾರ ಕೃಷಿ ಬೆಲೆ ಆಯೋಗದ ಸದಸ್ಯರನ್ನಾಗಿ 26 ಡಿ 2024 ರಂದು ನೇಮಕ ಮಾಡಿ ತಕ್ಷಣ ಜಾರಿಯಾಗುವಂತೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ಗ್ರಂಥಾಲಯದಲ್ಲಿ ಡಿಹೆಚ್. ಪೂಜಾರಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ, ಅಲ್ಲಮಪ್ರಭು ಪೂಜಾರಿ, ಯಮನಪ್ಪ Bsnl, ನಾಗಪ್ಪ ಗಿರಿಜಾಲಿ, ಹನುಮಂತ ಪನ್ನೂರು, ವೆಂಕಟೇಶ್ ಗಿರಿಜಾಲಿ, ರಮೇಶ್ ಪಟೇಲ್, ಬಿಎನ್, ಯಾರದಿಹಾಳ, ಚಿಟ್ಟಿ ಬಾಬು, ಇನ್ನು ಅನೇಕರು

ವರದಿ :ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!