Ad imageAd image

ಚಿಕ್ಕೋಡಿ ಹಾಲಟ್ಟಿ ನಗರದಲ್ಲಿ ಲಕ್ಷ್ಮಿ ದೇವಿಯ ಅದ್ಭುತವಾಗಿ ಐದು ದಿನಗಳ ಜಾತ್ರೆ ಸಂಭ್ರ ಸಂಭ್ರಮ.

Bharath Vaibhav
ಚಿಕ್ಕೋಡಿ ಹಾಲಟ್ಟಿ ನಗರದಲ್ಲಿ ಲಕ್ಷ್ಮಿ ದೇವಿಯ ಅದ್ಭುತವಾಗಿ ಐದು ದಿನಗಳ ಜಾತ್ರೆ ಸಂಭ್ರ ಸಂಭ್ರಮ.
WhatsApp Group Join Now
Telegram Group Join Now

ಚಿಕ್ಕೋಡಿ : ತಾಲೂಕಿನ ಹಾಲಟ್ಟಿ ನಗರದಲ್ಲಿ ಶ್ರೀ ಲಕ್ಷ್ಮಿ ದೇವಿ ಅದ್ಭುತ ಐದು ದಿನಗಳವರೆಗೆ ಪ್ರವಚನ ಹಾಗೂ ಮೂರು ದಿನಗಳ ಶ್ರೀ ಲಕ್ಷ್ಮಿ ದೇವಿ ವೈಭವ ಜಾತ್ರೆ ನೆರವೇರಿತು ಹಾಲಟ್ಟಿಯ ಲಕ್ಷ್ಮಿ ದೇವಿ ಜಾತ್ರೆ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ ಅದರಲ್ಲಿ ಈ ವರ್ಷ ಜಾತ್ರೆ ದಿನಾಂಕ ಫೆಬ್ರವರಿ 16 ರಿಂದ 23ರ ವರೆಗೆ ಅತಿ ವೈಭವ ಹಾಗೂ ವಿಜ್ಜನ ಮನೆಯಿಂದ ಆಚರಿಸಲಾಯಿತು.

ಶ್ರೀ ಶ್ರೀ ಶ್ರೀ ಮಠಾಧೀಶ್ವರಗಳ ಉಪಸ್ಥಿತಿಯಲ್ಲಿ ಈ ಲಕ್ಷ್ಮಿ ದೇವಿ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳು ನಡೆದವು ವಿಶೇಷವಾಗಿ ಚಿಕ್ಕೋಡಿ ಮಾತಂಗಿಯಿಂದ ಚಮಾಳಗಿ ಪಲ್ಲಕ್ಕಿ ರಥೋತ್ಸವ ಅತಿ ಅದ್ದೂರಿಯಾಗಿ ಹಾಲ್ಲಟ್ಟಿನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರ ಶ್ರೀ ಲಕ್ಷ್ಮಿ ದೇವಿ ಪಲ್ಲಕ್ಕಿ ಉತ್ಸವ ದೇವಸ್ಥಾನಕ್ಕೆ ಆಗಮಿಸಿತು ಈ ಜಾತ್ರೆಲಿ ವಿಶೇಷವಾಗಿ ಸಾವಿರಾರು ಮಹಿಳೆಯರ ಉಡಿ ತುಂಬ ಕಾರ್ಯಕ್ರಮ ಅತಿ ಅದ್ದೂರಿಯಾಗಿ ನೆರವೇರಿತು ಶ್ರೀ ಲಕ್ಷ್ಮಿ ಜಾತ್ರೆಯ ಕಮಿಟಿಯವರು ಎಲ್ಲ ಸಕಲ ಸೌಲಭ್ಯಗಳನ್ನು ಅತಿ ಜವಾಬ್ದಾರಿಯಾಗಿ ಹಾಗೂ ಸಹಕಾರದಿಂದ ನಿಭಾಯಿಸಿದ್ದಾರೆ ಶ್ರೀ ಸೋಮಯ್ಯ ದುಂಡಯ್ಯ ಹಿರೇಮಠ ಹಾಲಟ್ಟಿಯ ಧರ್ಮ ಗುರುಗಳು ತದನಂತರದ ದಿನಾಂಕ 22 ರಂದು ಎಲ್ಲಾ ಭಕ್ತರಿಗೆ ಮಹಾಪ್ರಸಾದ ಹಾಗೂ ಸನ್ಮಾನ ಸತ್ಕಾರ ಕಾಣಿಕೆ ಕಾರ್ಯಕ್ರಮಗಳು ನಡೆಯಿತು.

ಈ ಸಲ ಅತಿ ವಿಜ್ರಮಣಿಯಿಂದ ವಾದ್ಯ ಮೇಳಗಳೊಂದಿಗೆ ಶ್ರೀ ಲಕ್ಷ್ಮಿ ದೇವಿ ಜಾತ್ರೆಯ ನಿಮಿತ್ಯ ಐದು ದಿನಗಳವರೆಗೆ ಪ್ರವಚನ ಹಾಗೂ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು ಆಧ್ಯಾತ್ಮಿಕ ಪ್ರವಚನ ಹಾಗೂ ಮಹಾದ್ವಾರ ಉದ್ಘಾಟನೆ ದಿವ್ಯ ಸಾನಿಧ್ಯ ಶ್ರೀ ಪರಮಪೂಜ್ಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಜಗದ್ಗುರು ಸಂಪಾದನಾ ಮಹಾಸ್ವಾಮಿಗಳು ಸಂಪಾದನಾ ಚರ ಮೂರ್ತಿ ಮಠ ಚಿಕ್ಕೋಡಿ ಮತ್ತು ಶ್ರೀ ಸದ್ಗುರು ಡಾಕ್ಟರ್ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಪರಮಾನಂದವಾಡಿ ವಿವರಣೆ ತೃತ್ವದಲ್ಲಿ ವಿವಿಧ ರೀತಿಯ ಸಂಸ್ಕೃತಿಕ ಹಾಗೂ ಸ್ಪರ್ಧ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಅವುಗಳಲ್ಲಿ ಪ್ರಮುಖ ಕಾರ್ಯಕ್ರಮಗಳೇನೆಂದರೆ ದೇವಿ ಪಲ್ಲಕ್ಕಿ ಮೆರವಣಿಗೆ ಶ್ರೀ ಲಕ್ಷ್ಮಿ ದೇವಿ ಅಭಿಷೇಕ ಉಡಿ ತುಂಬುವುದು ಹಾಗೂ ನೈವರ್ದ್ಯ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಅದಲ್ಲದೆ ಹಾಲಟ್ಟಿಯ ಪ್ರಮುಖ ಬೀದಿಗಳಲ್ಲಿ ಭವ್ಯವಾದ ಮೇಲ್ಗಳೊಂದಿಗೆ ಸುಮಂಗಲಿಯರ ಅಂಬಲಿ ಬಿಂದಿಗೆಗಳೊಂದಿಗೆ ಸಾವಿರಾರು ಮಹಿಳೆಯರು ಆಗಮಿಸಿದ್ದು ಹಾಗೂ ಶನಿವಾರ ಮಧ್ಯಾಹ್ನ ಪೂಜ್ಯರ ಅಮೃತ ಹಸ್ತದಿಂದ ಮಹಾಪ್ರಸಾದವನ್ನು ಕೈಗೊಂಡಿದ್ದರು ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ವಿವಿಧ ಗನ್ಯರು ಮುಖಂಡರು ಗ್ರಾಮದ ಹಿರಿಯರು ರಾಜಕೀಯ ಗಣ್ಯ ವ್ಯಕ್ತಿಗಳು ಸೇರಿದಂತೆ ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.

ನಂತರ ವಿವಿಧ ಕಾರ್ಯಕ್ರಮಗಳು ನೆರವೇರಿದವು ವಿಶೇಷವಾಗಿ ಮಹಿಳೆಯರ ರಂಗೋಲಿ ಸ್ಪರ್ಧೆ ಹೋರಿ ಗಾಡಿ ಶರಿಯತ್ತು ಕುದುರೆ ಗಾಡಿ ಶರಿಯತ್ತು ಜೋಡಿ ಎತ್ತುಗಳ ಗಾಡಿಗಳ ಸೆರೆಯತ್ತು ಕಬ್ಬಡ್ಡಿ ಪಂದ್ಯಾವಳಿ ಕ್ರಿಕೆಟ್ ಪಂದ್ಯಾವಳಿಗಳು ಕುಸ್ತಿ ಪಂದ್ಯಾವಳಿಗಳು ಇನ್ನಿತರ ಸ್ಪರ್ಧೆಗಳ ಏರ್ಪಡಿಸಿದರು ಹಾಗೂ ವೇದಿಕೆ ನಾಟಕಗಳು ಮತ್ತು ಆರ್ಕೆಸ್ಟ್ರಾ ಸೇರಿದಂತೆ ವಿವಿಧ ಕಲಾಮ ನರಂಜನೆಗಳನ್ನು ಆಯೋಜಿಸಿದರು ಈ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಸಮಿತಿ ಹಾಲಟ್ಟಿ ಚಿಕ್ಕೋಡಿಯಲ್ಲ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಸೇರಿದಂತೆ ಸತತ ಐದು ದಿನಗಳ ಕಾಲ ಪ್ರವಚನ ಮಹಾಪ್ರಸಾದ ಕಮಿಟಿಯ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾತ್ರೆಯ ಸಂದರ್ಭದಲ್ಲಿ ಶ್ರೀಕಾಂತ ಶಿವಮೂರ್ತಿ ಚೆನ್ನವರ್, ಸಂಜಯ್ ಶ್ರೀಕಾಂತ್ ಚೆನ್ನವರ್, ಗಣಪತಿ ಶಂಕರ್ ದೊಡ್ಡಮನಿ, ದತ್ತಾ ಬಣ್ಣನವರ್, ನಾರಾಯಣ ಜಮಗೌಡರ್, ಅಶೋಕ್ ಬಸವಣ್ಣಿ ಚನ್ನವರ, ಭೀಮಶೇನ್ ಚೆನ್ನವರ್, ಮಲ್ಲೇಶಿ ಲಿಂಬಿಗಿಡ, ಸುರೇಶ್ ಪಟ್ಲಿ, ಶಂಕರ್ ಬನ್ನನ್ನವರ್, ರಮೇಶ್ ಚನ್ನವರು, ಗಣಪತಿ ಕಾಂಬಳೆ, ಭೀಮಸೇನ ಅರಭಾವಿ, ಧನ್ಪಾಲ್ ದಾಮಣ್ಣವರ್, ಸೋಮಯ್ಯ ಹಿರೇಮಠ, ಅಶೋಕ್ ಪೂಜಾರಿ, ಸಂತೋಷ್ ಜೋಗುಳೇ, ವಿಶ್ವನಾಥ ಕಾಮಗೌಡ ,ಶಿವಪ್ಪಾ ಚೆನ್ನವರ್, ಭರತ್ ಜೋಗಳೆ, ಮಾರುತಿ ಹಿರೆಕೋಡಿ, ಇನ್ನ ಇತರರೆಲ್ಲರೂ ಉಪಸ್ಥಿತರಿದ್ದರು.

ವರದಿ :ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!