ಮುದಗಲ್ಲ : ನೀರಿಲ್ಲದೇ ಯಾವ ಜೀವಿ ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ಜೀವಿಗೂ ನೀರಿನ ಅವಶ್ಯಕತೆಯಿದೆ. ಬೇಸಿಗೆ ಇನ್ನೇನು ಶುರುವಾಗಲಿದ್ದು, ಸ್ವಲ್ಪ ಓಡಾಡಿದರೂ ಬಾಯಾರಿಕೆ ಆಗುತ್ತದೆ. ಜನರ ದಾಹ ನೀಗಿಸುವುದಕ್ಕಾಗಿ ಈ ಅರಟ್ಟಿಗೆ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.ಎಂದು ಪಂಚಾಯತ್ ರಾಜ್ ವಿಶೇಷ ಕಾಯ೯ದಶಿ೯ ಗಳಾದ ಶ್ರೀ ಚಂದ್ರಶೇಖರ್ ಹೇಳಿದರು
ಪಟ್ಟಣದ ಪೋಲೀಸ್ ಠಾಣೆಯಲ್ಲಿ ಯ ಮುಂಭಾಗದ ಲಿಂಗಸೂರು ಮುಖ್ಯ ರಸ್ತೆ ಬದಿ ಮಾಜಿ ಶಾಸಕರಾದ ಎಂ ಗಂಗಣ್ಣ ಅಭಿಮಾನಿಗ ಸಂಘ ಹಾಗೂ ಮುದಗಲ್ಲ ನ ಕಾಂಗ್ರೆಸ್ ಯುವ ಘಟಕ ಸಾರ್ವಜನಿಕರಿಗೆ ಆಯೋಜಿಸಿರುವ ಉಚಿತ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಕೇಂದ್ರಕ್ಕೆ ರವಿವಾರ ಚಾಲನೆ ನೀಡಿ ಮಾತನಾಡಿ, ಬೇಸಿಗೆ ಸಂದರ್ಭದಲ್ಲೆ ಎಂ ಗಂಗಣ್ಣ ಅಭಿಮಾನಿಗ ಸಂಘ ಹಾಗೂ ಯುವ ಘಟಕ ವತಿಯಿಂದ ಸಂಘ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಸ್ಥಾಪನೆ ಮಾಡಿರುವುದು ಉತ್ತಮವಾದ ಕಾರ್ಯ ಎಂದ ಅವರು, ಪಟ್ಟಣದ ಕಚೇರಿಗಳಿಗೆ ಇಲ್ಲಿಗೆ ನಿತ್ಯ ನೂರಾರು ಜನ ಬಂದು ಹೋಗುವರು. ಅರವಟ್ಟಿಗೆಯಿಂದ ತುಂಬ ಉಪಯೋಗವಾಗುತ್ತದೆ. ಆದರೆ ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಪುರಸಭೆ ಸದಸ್ಯ ರಾದ ಎಸ್ ಆರ್ ರಸೂಲ್ ಮಾತನಾಡಿ, ಹಳ್ಳಿಯಿಂದ ನಾನಾ ಕೆಲಸಗಳಿಗೆ ಪಟ್ಟಣಕ್ಕೆ ಬರುವ ಬಡ ಜನರಿಗೆ ಕುಡಿಯುವ ನೀರನ್ನು ಹೋಟೆಲ್‌ನಲ್ಲಿ ಉಚಿತವಾಗಿ ನೀಡುವುದು ಕಷ್ಟ. ಆದ್ದರಿಂದ ನೀರಿನ ಮಹತ್ವ ಅರಿತು ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸಲು ಅರವಟ್ಟಿಗೆ ಸ್ಥಾಪನೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾಯ೯ದಶಿ೯ ಹುಸೇನ್ ಬಾಷಾ ಮುನ್ನ ಮಾತನಾಡಿ ನಾನಾ ಕೆಲಸಗಳ ನಿಮಿತ್ತ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಕ್ಕೆ ಬರುವ ರೈತರು, ಸಾರ್ವಜನಿಕರಿಗೆ ಬೇಸಿಗೆ ಹಿನ್ನೆಲೆಯಲ್ಲಿ ಉಚಿತ ನೀರು ಕಲ್ಪಿಸಲು ಎಂ ಗಂಗಣ್ಣ ಅಭಿಮಾನಿಗ ಸಂಘ ಹಾಗೂ ಯುವ ಘಟಕ ವತಿಯಿಂದ ಮುಂದಾಗಿರುವುದು ಶ್ಲಾಘನೀಯ ಅವರು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಸ್ ಆರ್ ರಸೂಲ್ ಸಾಬ , ಅಬ್ದುಲ್ ಖದೀರ್ ಪಾನ್ ವಾಲೆ , ಅಮರಯ್ಯ ಹಿರೇಮಠ್ , ಹುಸೇನ್ ಬಾಷಾ ಮುನ್ನ , ಮೌನೇಶ್ ಚಲುವಾದಿ , ಗಂಗಾಧರ್ ಯಾದವ್, ಇತರರು ಉಪಸ್ಥಿತರಿದ್ದರು
ವರದಿ: ಮಂಜುನಾಥ ಕುಂಬಾರ




