ವಿವಾಹಿತ ಮಹಿಳೆಯರಲ್ಲಿ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ತಡೆಯಲು ಶ್ರೀನಿವಾಸ ನಾಯಕ ಬಡಾವಣೆಯಲ್ಲಿ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮಣ್.

Bharath Vaibhav
ವಿವಾಹಿತ ಮಹಿಳೆಯರಲ್ಲಿ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ತಡೆಯಲು ಶ್ರೀನಿವಾಸ ನಾಯಕ ಬಡಾವಣೆಯಲ್ಲಿ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮಣ್.
WhatsApp Group Join Now
Telegram Group Join Now

ಮೊಳಕಾಲ್ಮೂರು: ಪಟ್ಟಣದ ಶ್ರೀನಿವಾಸ ನಾಯಕ ಬಡಾವಣೆಯಲ್ಲಿ ವರ್ಷದ ಕೊನೆಯ ದಿನವಾದ ಮಂಗಳವಾರ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ್ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದರು.

ಇಕಿನ ಕಾಲಮಾನದಲ್ಲಿ ಎಲ್ಲವೂ ಕಲಬೆರಿಕೆಯಾಗಿದೆ ಸೊಪ್ಪಿನಿಂದ ಹಿಡಿದು ಎಲ್ಲಾ ಪದಾರ್ಥಗಳಲ್ಲಿ ಕಲೆ ಬೆರಿಕೆ ಎದ್ದು ಕಾಣುತ್ತದೆ ಇದರಿಂದ ಅನೇಕ ಮಹಿಳೆಯರಿಗೆ ರಕ್ತ ಹೀನತೆ ಕೊರತೆ ಇನ್ನೂ ಅನೇಕ ಅಪೌಷ್ಟಿಕತ ಕಾಯಿಲೆಗಳು ಹೆಚ್ಚಾಗುತ್ತಿವೆ ವಿವಾಹಿತ ಮಹಿಳೆಯರಲ್ಲಿ 18 ವರ್ಷದಿಂದ 35 ವರ್ಷದ ಮಹಿಳೆಯರಲ್ಲಿ ಈಗಿನ ಆಹಾರ ಪದಾರ್ಥಗಳು ರಾಸಾಯನಿಕ ಹೆಚ್ಚಾಗಿರುವುದರಿಂದ ರಕ್ತ ಹೀನತೆ ಹೆಚ್ಚಾಗಿ ಕಂಡುಬರುತ್ತದೆ ಅದೇ ರೀತಿ ಮಕ್ಕಳಾಗದಿರುವುದು, ಇನ್ನು ಅನೇಕ ಸಾಂಕ್ರಮಿಕ ರೋಗಗಳು ಹರಡುತ್ತವೆ. ಆದ್ದರಿಂದ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರೋ. ಅದೇ ರೀತಿ ಪೌಷ್ಟಿಕ ಆಹಾರ ಕೆಟ್ಟನ್ನು ವಿತರಣೆ ಮಾಡಿದರೋ.

ಇದೇ ಸಂದರ್ಭದಲ್ಲಿ ಜನ ಸಂಸ್ಥಾನ ಸಂಸ್ಥೆಯ ಕಾರ್ಯದರ್ಶಿಪಿ ವಿರೂಪಾಕ್ಷಪ್ಪ ಈ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಎಲ್ಲಾ ಮಹಿಳೆಯರು ಉತ್ತಮ ಜೀವನ ನಡೆಸಿಕೊಂಡು ಹೋಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ನಾಯಕ ಬಡಾವಣೆಯ ಎಂ ರಮೇಶ್ ಬೀದಿಬದಿ ವ್ಯಾಪಾರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಅಂಗನವಾಡಿ ಕಾರ್ಯಕರ್ತೆ ಕಮಲಮ್ಮ ಇನ್ನೂ ಹಲವರು ಉಪಸ್ಥಿತರಿದ್ದರು.

ವರದಿ : ಪಿಎಂ ಗಂಗಾಧರ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!