ರಾಯಚೂರು : ಕ್ಯಾನ್ಸರ್ ಗೆದ್ದು ವಿಶ್ರಾಂತಿ ಪಡೆಯುತ್ತಿರುವ ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಮಂತ್ರಾಲಯಕ್ಕೆ ತೆರಳಿ ಗುರುರಾಯರ ದರ್ಶನ ಪಡೆದಿದ್ದಾರೆ.
ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿಕೊಟ್ಟ ಶಿವಣ್ಣ ದಂಪತಿ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.ನಂತರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳಿಂದ ಆಶಿರ್ವಚನ ಪಡೆದಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಶ್ರೀಗಳ ಜತೆ ಮಾತುಕತೆ ನಡೆಸಿದ ಶಿವಣ್ಣ, ಆಧ್ಯಾತ್ಮಿಕ ವಿಚಾರಗಳ ಕುರಿತು ಸಹಜ ಮಾತುಕತೆ ನಡೆಸಿದರು.
ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಮೊದಲ ಬಾರಿಗೆ ಮಂತ್ರಾಲಯಕ್ಕೆ ಭೇಟಿ ಭೇಟಿ ನೀಡಿದ್ದಾರೆ. ಆಪರೇಶನ್ ಗೂ ಮುನ್ನ ಹರಕೆ ಹೊತ್ತಿದ್ದ ಶಿವಣ್ಣ, ವಿವಿಧ ದೇಗುಲಕ್ಕೆ ಭೇಟಿ ಕೊಡುತ್ತಿದ್ದಾರೆ. ಏಪ್ರಿಲ್ ನಂತರ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.




