ಕಲಘಟಗಿ : ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ 50 ನೇ ಜನ್ಮದಿನದ ಪ್ರಯುಕ್ತ ಲಾಡ್ ಅಭಿಮಾನಿಗಳ ಬಳಗ ಹಾಗೂ ಸಂತೋಷ ಲಾಡ್ ಫೌಂಡೇಶನ ವತಿಯಿಂದ ಫೆ. 24 ಸೋಮವಾರದಂದು ಕಲಘಟಗಿ ತಾಲೂಕಿನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಜಿಲ್ಲಾ ಗ್ಯಾರಂಟೀ ಕಮೀಟಿ ಅಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.
ಅವರು ಪಟ್ಟಣದ ಅಮೃತನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಣೆ ಹಮ್ಮಿಕೊಂಡಿದ್ದು ತಾಲೂಕಿನ 1150 ವಿದ್ಯಾರ್ಥಿಗಳು ಈ ಪ್ರಯೋಜನ ಪಡೆಯಲಿದ್ದಾರೆ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಮಾತನಾಡಿ ಕಡಿಮೆ ವೇತನ ಪಡೆದು ಸೇವೆ ಮಾಡುತ್ತಿರುವ 175 ಎನ್.ಆರ್.ಎಲ್.ಎಂ ಸಖಿಯರು ಹಾಗೂ 137 ಆಶಾ ಕಾರ್ಯಕರ್ತರಿಗೆ ಸಹಾಯಧನ ನೀಡಲಾಗುವುದು ಎಂದರು. ತಾಪಂ ಮಾಜಿ ಅಧ್ಯಕ್ಷ ಬಿ ವೈ ಪಾಟೀಲ ಮಾತನಾಡಿ ಕಾರ್ಯಕ್ರಮವನ್ನು ಸೋಮವಾರ ಸಂಝೆ 5 ಗಂಟೆಗೆ ಅದ್ಧೂರಿಯಾಗಿ ಆಯೋಜಿಸಿದ್ದು ಮನರಂಜನೆ ಕಾರ್ಯಕ್ರಮಕ್ಕೆ ನಾಡಿನ ಪ್ರಮುಖ ವಾಹಿನಿಗಳ ಕಲಾವಿದರು ಆಗಮಿಸುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹರಿಶಂಕರ ಮಠದ, ಯಲ್ಲಪ್ಪ ಚವರಗಿ, ಸೋಮಶೇಖರ ಬೆನ್ನೂರ, ಬಾಳು ಖಾನಾಪುರ, ಹನುಮಂತ ಕಾಳೆ, ಹನುಮಂತ ಚವರಗುಡ್ಡ ಮತ್ತಿರರಿದ್ದರು.




