ಐಗಳಿ:ಅಥಣಿ ತಾಲೂಕಿನ ಐಗಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಬರುವ ಪಡತರವಾಡಿ ಗ್ರಾಮದ ಮಹದೇವ ಆನಂದ ದೇವಕಾತೆ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ನೆನ್ನೆ ರಾತ್ರಿ 8:00 ಸುಮಾರಿಗೆ ಮನೆಯಲ್ಲೇ ಎಲ್ಲಾ ಕುಟುಂಬಸ್ಥರು ಇರುವಾಗಲೇ ಆಕಸ್ಮಿಕವಾಗಿ ಬೆಂಕಿ ಹತ್ತಿ ಸಂಪೂರ್ಣವಾಗಿ ಗುಡಿಸಲು ಸುಟ್ಟು ಭಸ್ಮವಾಗಿದೆ ಆದ್ದರಿಂದ ಈ ಕುಟುಂಬ ಬೀದಿ ಪಾಲಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕಾಗಿದೆ. ಪ್ರತಿಯೊಂದು ವಸ್ತುಗಳನ್ನು ಕಳೆದುಕೊಂಡ ಕುಟುಂಬಕ್ಕೆ ಆಸರೆಯಾಗಬೇಕಾಗಿದೆ ಘಟನೆ ಸ್ಥಳಕ್ಕೆ ಅಥಣಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸು ಅಷ್ಟೊತ್ತಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಆಸರೆಯಾಗಬೇಕಾಗಿದೆ.

ಇನ್ನೂ ಅಥಣಿ ತಾಲೂಕಿನಲ್ಲಿ ಪೂರ್ವಭಾಗದ ಐಗಳಿ,ತೆಲಸಂಗ, ಕೊಟ್ಟಲಗಿ, ಕಕಮರಿ ಗ್ರಾಮಗಳಿಗೆ ಸುಮಾರು 40 ರಿಂದ 50 ಕಿಲೋಮೀಟರ್ ವ್ಯಾಪ್ತಿರುವುದರಿಂದ ಅಗ್ನಿಶಾಮಕ ವಾಹನ ಅಥಣಿ ಯಿಂದ ಬರಬೇಕಾಗಿದ ಅನಿವಾರ್ಯತೆ ಯಾಗಿದೆ ಆದಕಾರಣ ಈಗ ಬೇಸಿಗೆ ಇರುವುದರಿಂದ ಇತರಹ ಘಟನೆಗಳು ಸಂಭವಿಸಬಹುದು ಆದ್ದರಿಂದ ಹಲವಾರು ದಿನಗಳ ಬೇಡಿಕೆಯಾದ ಪೂರ್ವ ಭಾಗಕ್ಕೆ ಇನ್ನೊಂದು ಅಗ್ನಿಶಾಮಕ ಠಾಣೆ ಅತ್ಯಂತ ಜರೂರು ಇದ್ದು ಇತರ ಘಟನೆ ಸಂಭವಿಸಿದಾಗ 15 ನಿಮಿಷ ಒಳಗಾಗಿ ವಾಹನ ಬಂದರೆ ಇತರ ಘಟನೆಗಳನ್ನು ತಪ್ಪಿಸಬಹುದಾಗಿದೆ ಈ ಕುರಿತು ಅಥಣಿ ಶಾಸಕರಾದ ಲಕ್ಷ್ಮಣ್ ಸವದಿ ಅವರು ಈ ಭಾಗಕ್ಕೆ ಇನ್ನೊಂದು ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕೆಂದು ಈ ಭಾಗದ ಸಾರ್ವಜನಿಕರ ಬೇಡಿಕೆಯಾಗಿದೆ.
ವರದಿ: ಆಕಾಶ್ ಮಾದರ




