ಬಾಗಲಕೋಟೆ : ಚಾಲುಕ್ಯರ ನಾಡು ಬಾದಾಮಿಯ ರೈತಪರ ಹೋರಾಟಗಾರು ಹಾಗೂ ಬಗರ್ ಹುಕುಂ ಸೇವಾಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಸಾಕಷ್ಟು ರೈತರ ಭೂಮಿಯನ್ನು ಉಳಿಸಿಕೊಕೊಳ್ಳುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ ರೈತಪರ ಹೋರಾಟಗಳಲ್ಲಿನ ಪಾದರಸದಂತ ಕಾರ್ಯಚಟುವಟಿಕೆಗಳನ್ನು ಗುರುತಿಸಿ ನ್ಯಾಷನಲ್ ಅಪನಿ ಪಾರ್ಟಿ ಬಾದಾಮಿಯ ಎಂ. ಕೆ. ಗಾಣಿಗೇರ ಅವರನ್ನು ರೈತ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕೂಡಲೇ ರಾಜ್ಯಾದ್ಯಂತ ನ್ಯಾಷನಲ್ ಅಪನಿ ಪಾರ್ಟಿಯ ರೈತ ಘಟಕದಿಂದ ಜಿಲ್ಲಾ ಮಟ್ಟ, ತಾಲೂಕು ಮಟ್ಟ, ಹೋಬಳಿ ಮಟ್ಟಗಳಲ್ಲಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲು ನ್ಯಾಷನಲ್ ಅಪನಿ ಪಾರ್ಟಿ ಅದೇಶಿಸಿದೆ.
ರಾಜ್ಯದ ನೆಲ, ಜಲ, ಭಾಷೆ, ನಾಡು ನುಡಿ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಒತ್ತು ಕೊಟ್ಟು ಸಂವಿಧಾನ ಬದ್ದವಾಗಿ ನ್ಯಾಷನಲ್ ಪಾರ್ಟಿಯನ್ನು ಸಂಘಟಿಸಲು ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯೋಣ್ಮುಖರಾಗಿ ಕಾರ್ಯನಿರ್ವಹಿಸಬೇಕೆಂದು ನ್ಯಾಷನಲ್ ಅಪನಿ ಪಾರ್ಟಿ ಆದೇಶ ಹೊರಡಿಸಿ ಕಾರ್ಯಪ್ರವೃತ್ತರಾಗಬೇಕೆಂದು ಆದೇಶಪ್ರತಿ ರವಾನೆ ಮಾಡಿ ರೈತ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದೆ.
ವರದಿ:- ರಾಜೇಶ್. ಎಸ್. ದೇಸಾಯಿ




