ಮೈಸೂರು : ಗ್ಯಾರಂಟಿ ಹೆಸರಲ್ಲಿ ಸರ್ಕಾರ ಜನರ ಕಿವಿಗೆ ಹೂವು ಮೂಡಿಸುತ್ತಿದೆ.KSRTC ಬಳಿಕ ಈಗ ವಿದ್ಯುತ್ ನಿಗಮವನ್ನು ಹಾಳು ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಲ್ಲಿ ಮಾತಾಡಿದ ಅವ್ರು, ಒಂದು ಗ್ಯಾರಂಟಿ ಯೋಜನೆಯೂ ಸಹ ಜನರಿಗೆ ತಲುಪುತ್ತಿಲ್ಲ.ಜನರು ರೋಸಿ ಹೋಗಿದ್ದಾರೆ.ಸುಮ್ಮನೆ ಗ್ಯಾರಂಟಿ ಯೋಜನೆ ಯಶಸ್ವಿ ಎಂದು ಬೀಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ವಿಚಾರ ಖಂಡನೀಯ.ರಾಜ್ಯ ಸರ್ಕಾರ ಕೂಡಲೇ ಮರಾಠಿಗರ ಪುಂಡಾಟ ನಿಲ್ಲಿಸಬೇಕು.ಕನ್ನಡಿಗರು ಗಲಾಟೆ ಮಾಡಿದರೆ ಅವರಿಗಿಂತ ಜೋರಾಗಿ ಗಲಾಟೆ ಮಾಡುತ್ತೇವೆ.
ನಮಗೆ ಪುಂಡಾಟಿಕೆ ಇಷ್ಟ ಇಲ್ಲ. ರಾಜ್ಯದ ಭಂಡ ಸರ್ಕಾರ ಕನ್ನಡಿಗರ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದುಕೊಂಡಿದ್ದೇನೆ .ಮರಾಠಿ ಪುಂಡರಿಗೆ ತಕ್ಕ ಪಾಠ ಕಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಗ್ರಹಿಸಿದರು.




