ಬೆಳಗಾವಿ: ಕನ್ನಡಪರ ಸಂಘಟನೆಗಳನ್ನು ನಾಲಾಯಕ್ ಎಂದು ವೀಡಿಯೋದಲ್ಲಿ ಹೇಳಿ ಅದನ್ನು ಸಾರ್ವಜನಿಕವಾಗಿ ಹರಿಬಿಟ್ಟಿದ್ದ ಎಂಇಎಸ್ ಪುಂಡನ ವಿರುದ್ಧ ಮಾಳಮಾರುತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಗಾವಿಯಲ್ಲಿ ಕನ್ನಡ ಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ, ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣ, ದಿನೇ ದಿನೇ ಹೊಸ ರೂಪ ಪಡೆಯುತ್ತಿದೆ.
ಕನ್ನಡ ಮಾತನಾಡುವಂತೆ ಹೇಳಿದ್ದ ಕಂಡಕ್ಟರ್ ಅನ್ನು ಬೆಂಬಲಿಸಿದ್ದ ಕನ್ನಡಪರ ಸಂಘಟನೆಗಳನ್ನು ನಾಲಾಯಕ್ ಎಂದಿದ್ದ ಎಂಇಎಸ್ ಮುಖಂಡ ಶುಭಂ ಶೇಳಕೆ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಶುಭಂ, ಒಂದು ವೀಡಿಯೋ ಹೇಳಿಕೆಯಲ್ಲಿ ಕನ್ನಡಿಗರಿಗೆ ಪ್ರಚೋದನೆ ಕೊಡುವಂತೆ, ಕನ್ನಡಪರ ಸಂಘಟನೆಗಳನ್ನು ನಾಲಾಯಕ್ ಎಂದು ಹೇಳಿದ್ದರು. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್ (ವಿಭಾಗ) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.




