ಬೆಳಗಾವಿ: ಕನ್ನಡ ಮಾತಾಡಿ ಎಂದ ಕಾರಣಕ್ಕೆ ಮರಾಠಿ ಪುಂಡರು ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಪೋಕ್ಸೋ ಕೇಸ್ ದಾಖಲಿಸಿದ್ದ ಪ್ರಕರಣದಲ್ಲಿ ಸಿಪಿಐ ಅಮಾನತ್ತಾಗಿದ್ದಾರೆ.
ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮಹದೇವ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಬೆಳಗಾವಿಯ ಮಾರಿಹಾಳ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಸಸ್ಪೆಂಡ್ ಆಗಿದ್ದಾರೆ.
ಮಾರಿಹಾಳ ಠಾಣೆಯಿಂದ ಬೆಳಗಾವಿಯ ಸಿಸಿಆರ್ಬಿಗೆ ಗುರುರಾಜ್ ಅವರನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ. ಸಧ್ಯ ಮಾರಿಹಾಳ ಠಾಣೆಯ ನೂತನ ಸಿಪಿಐ ಆಗಿ ಮಂಜುನಾಥ ನಾಯಕ ಅವರನ್ನು ನೇಮಕ ಮಾಡಲಾಗಿದೆ.



