ಪಾವಗಡ : ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕ್ ದಿನಾಂಕ, 24/02/25 ಸೋಮವಾರ ಸಾಸಲು ಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪೋಲೇನಹಳ್ಳಿ ಗ್ರಾಮದ ಗೊಂಚಿಕುಂಟೆ ಕೆರೆ ಕಾಮಗಾರಿ ಗುದ್ದಲಿ ಪೂಜೆ ಹಾಗು ಉದ್ಘಾಟನೆ ನೆರವೇರಿಸಿ ಮಾತನಾಡಿದ ತಾಲ್ಲೂಕ್ ರೈತಸಂಘದ ಅಧ್ಯಕ್ಷರಾದ ನರಸಿಂಹರೆಡ್ಡಿ ಮಾತನಾಡಿ ಪೂಜ್ಯ ಡಾ ವಿರೇಂದ್ರ ಹೆಗ್ಗಡೆಯವರು ರಾಜ್ಯಾದಂತಹ ಶ್ರೀ ಕ್ಷೇತ್ರಧಮ೯ಸ್ಥಳ ಗ್ರಾಮಾಭಿವೃದ್ದಿಯೋಜನೆ ಮೂಲಕ 60 ಲಕ್ಷಕ್ಕು ಹೆಚ್ಚು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಬ್ಯಾಂಕ್ ಮೂಲಕ ಮಾಡಿರುತ್ತಾರೆ ತಾಲ್ಲೂಕ್ ಯೋಜನಾಧಿಕಾರಿಗಳಾದ ಮಹೇಶ್ ರವರು ಮಾತನಾಡಿ ಪಾವಾಗಡ ತಾಲ್ಲೂಕ್ ವಷ೯ಕ್ಕೆ ಒಂದು ಕೆರೆಯಂತೆ 6 ಕೆರೆಗಳನ್ನ ಪುನಶ್ಚೇತನಗೊಳಿಸಿ ಈ ವರ್ಷ ಹೊಸದಾಗಿ ಪೋಲೇನಹಳ್ಳಿ ಗ್ರಾಮದ ಗೊಂಚಿಕುಂಟೆ ಕೆರೆ ಕಾಮಗಾರಿಗೆ ರೊ 7.25 ಲಕ್ಷ ಮೊತ್ತ ಮಂಜೂರಾತ ಮಾಡಿಕೊಂಡು ಮುಂದಿನ ದಿನಗಳಲ್ಲಿ ಕೆರೆಯ ಸ್ವಚ್ಚತೆ ಮಾಡಿಕೊಂಡು ಸಂರಕ್ಷಣೆ ಮಾಡಿಕೊಂಡು ಹೋಗುವ ಜವಬ್ದಾರಿ ಕೆರೆ ಸಮಿತಿಯವರದ್ದು ಎಂದು ತಿಳಿಸಿದರು ಈ ವೇಳೆ ಕಾಯ೯ಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರಾದ ಶ್ರೀನಿವಾಸರೆಡ್ಢಿ ಗ್ರಾಮ ಪಂಚಾಯತಿ ಸದಸ್ಯರಾದ ನಿರಂಜನ್ ರೆಡ್ಡಿ ಸಮಿತಿ ಉಪಾಧ್ಯಕ್ಷರಾದ ಚೆಂದ್ರಮೌಳಿ ಸದಸ್ಯರಾದ ಸುದಶ೯ನರೆಡ್ಡಿ ಪ್ರಮೀಳಮ್ಮ ಅಂಜಿನರೆಡ್ಡಿ ರೈತರು ಸ್ವ ಸಹಾಯ ಸಂಘಗಳ ಸದಸ್ಯರು ವಲಯ ಮೇಲ್ವಿಚಾರಕರು ಕೃಷಿ ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಪಾಳೇಗಾರ ಲೋಕೇಶ್ ಹಾಗೂ ಸ್ಥಳೀಯ ಗ್ರಾಮಸ್ಥರು ಬಾಗವಹಿಸಿದ್ದರು
ವರದಿ : ಶಿವಾನಂದ ಪಾವಗಡ




