ಲಿಂಗಸುಗೂರು : ಮಹಾ ಶಿವರಾತ್ರಿ ನಿಮಿತ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹಟ್ಟಿ ಚಿನ್ನದ ಗಣಿ ಪಟ್ಟಣ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಹಟ್ಟಿ ಪಟ್ಟಣ ದಲ್ಲಿ ಇಂದು ಬೆಳಗ್ಗೆ ಪರಮಾತ್ಮಶಿವನ ಧ್ವಜಾರೋಹಣ ನೆರವೇರಿಸುವ ಮೂಲಕ ಶಿವನ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ನಂತರ ಹಟ್ಟಿ ಕ್ಯಾಂಪ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ಚೌಡೇಶ್ವರಿ ದೇವಸ್ಥಾನದ ಹತ್ತಿರ 12 ಜ್ಯೋತಿರ್ಲಿಂಗಗಳಿಗೆ ಪೂಜೆ ಸಲ್ಲಿಸಿ ಸದ್ಭಾವನಾ ಶಾಂತಿ ಯಾತ್ರೆ ಹಾಗೂ ಶಿವಲಿಂಗಗಳ ಮೆರವಣಿಗೆ ಕಾರ್ಯಕ್ರಮಕ್ಕೆ ಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ಅವರು ಚಾಲನೆ ನೀಡಿದರು.

ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಬಿ ಕೆ ಇಂದಿರಾ ಅಕ್ಕನವರು ಮಾತನಾಡಿ ಮಹಾಶಿವರಾತ್ರಿಯ ನಿಮಿತ್ತ ಜಗದೇಕ ಒಡೆಯನಾಗಿರುವಂತಹ, ಇಡೀ ವಿಶ್ವದ ಎಲ್ಲಾ ಆತ್ಮಗಳಿಗೆ ಏಕೈಕ ತಂದೆಯಾಗಿರುವ ಪರಮಾತ್ಮನನ್ನ ಏಕೇಶ್ವರ, ಲೋಕೇಶ್ವರ, ಪರಮೇಶ್ವರ ಹೀಗೆ ಸಾವಿರಾರು ಹೆಸರುಗಳ ಮೂಲಕ ಕರೆಸಿಕೊಳ್ಳುವ ಶಿವನ ಅವತರಣಿಕೆಯ ದಿನ ಮಹಾಶಿವರಾತ್ರಿ ಆಗಿದೆ.
ಜಗತ್ತಿನಲ್ಲಿಂದು ಅಜ್ಞಾನವೆಂಬ ಕತ್ತಲು ಆವರಿಸಿಕೊಂಡಿದೆ.ಆದ್ದರಿಂದ ಭಯ, ಅಶಾಂತಿಯನ್ನ ಆ ಪರಮಾತ್ಮನು ನಿವಾರಿಸಿ ಲೋಕ ಕಲ್ಯಾಣವನ್ನುಂಟು ಮಾಡಲೆಂದು ಹಮ್ಮಿಕೊಳ್ಳಲಾಗಿದೆ.
ಡೊಳ್ಳುಗಳ ಮೂಲಕ ಪಟ್ಟಣದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ,
ಶ್ರೀ ಭೀಮಾಶಂಕರ, ರಾಮೇಶ್ವರ, ವೈದ್ಯನಾಥ, ತ್ರಯಂಬಕೇಶ್ವರ, ಓಂಕಾರೇಶ್ವರ, ಕೇದಾರೇಶ್ವರ, ನಾಗೇಶ್ವರ, ಗೌರಿಶಂಕರ ಮಹಾ ಕಾಳೇಶ್ವರರ ಶಿವಲಿಂಗಗಳ ಮಾದರಿಯನ್ನು ಕಾರು ಮತ್ತು ಆಟೋಗಳ ಮೇಲೆ ದರ್ಶನಕ್ಕೆ ಇಡಲಾಗಿತ್ತು.
ಸುಮಂಗಲೆಯರು ಕಳಸವನ್ನು ಹೊತ್ತು ನಡೆದರು ಓಂ ಶಾಂತಿಯ ಆರಾಧಕರು ಪರಮಾತ್ಮನ ಅವತಾರಗಳ ಸಂದೇಶದ ಬಿತ್ತಿಪತ್ರಗಳನ್ನು ಹಂಚುತ್ತಾ ಮುಂದೆ ಸಾಗಿದರು.
ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆಯು ಹಟ್ಟಿ ಪಟ್ಟಣದ ಮುಖ್ಯರಸ್ತೆಯ ಮೂಲಕ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಹಟ್ಟಿ ಪಟ್ಟಣದ ಸಂತೆ ಬಜಾರ್ ತಲುಪಿ ಮುಕ್ತಾಯಗೊಂಡಿತು .ಬಂದಂತ ಶಿವ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸಂಚಾಲಕರು, ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ, ಹಟ್ಟಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ನಾಗರತ್ನ ಗುರಿಕಾರ್, ಮಲ್ಲಿಕಾರ್ಜುನ್ ಬುದ್ಧಿಣಿ, ಪ್ರಭುಗೌಡ, ರಾಜೇಶ್ವರಿ ಬುದ್ದಿನ್ನಿ, ಗೌರಿ ರಾಘವೇಂದ್ರ, ಶಾಂತ ಆಶಾ ವರ್ಕರ್, ಶ್ರೀನಿವಾಸ್ ಮಧುಶ್ರೀ ಸೇರಿದಂತೆ ಇನ್ನೂ ಅನೇಕ ಶಿವಭಕ್ತರು ಉಪಸ್ಥಿರಿದ್ದರು.
ವರದಿ : ಶ್ರೀನಿವಾಸ್ ಮಧುಶ್ರೀ




