ರಾಯಚೂರು: ರಾಜಕಾರಣಿಗಳನ್ನು ಬೀಳಿಸಲು ಹನಿಟ್ರ್ಯಾಪ್ ಮಾಡುವುದು ಸಾಮಾನ್ಯ. ಆದರೆ ರಾಯಚೂರಿನಲ್ಲಿ ಗಂಡು ಚಿರತೆಯನ್ನು ಬೋನಿಗೆ ಬೀಳಿಸಲು ಹನಿಟ್ರ್ಯಾಪ್ ಮಾಡಲಾಗಿದೆ. ಅಲ್ಲದೆ ಇದು ಯಶಸ್ವಿ ಕೂಡ ಆಗಿದೆ. ಇದರಿಂದಾಗಿ ರಾಯಚೂರು ಅರಣ್ಯ ಇಲಾಖೆಯ ಅಧಿಕಾರಿಗಳ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು… ರಾಯಚೂರಿನ ಮಲಯಾಬಾದ್‌ನಲ್ಲಿ ಕಳೆದ ಆರು ತಿಂಗಳಿನಿಂದ ಗಂಡು ಚಿರತೆಯೊಂದು ಜನರ ನಿದ್ದೆಗೆಡಿಸಿತ್ತು. ಮನೆಯ ಮುಂದೆ ಕಟ್ಟಿ ಹಾಕುವ ಕುರಿ, ಮೇಕೆ, ದನ, ಕೋಳಿ ಯಾವುದನ್ನೂ ಬಿಡದೆ ಚಿರತೆ ದಾಳಿ ಮಾಡಿ ಕೊಂದು ಹಾಕುತ್ತಿತ್ತು. ಸಂಜೆ ಆದರೆ ಸಾಕು ಜನ ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು. ಹೊಲ ಗದ್ದೆಗಳಲ್ಲಿ ಜಾನುವಾರಗಳನ್ನು ಮೇಯಿಸಲು ಕೂಡ ಕಷ್ಟವಾಗಿತ್ತು. ಹೀಗಾಗಿ ಸ್ಥಳೀಯ ಜನ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಚಿರತೆ ಪತ್ತೆಗೆ ಅರಣ್ಯ ಇಲಾಖೆ ಹರಸಾಹಸ ಸ್ಥಳೀಯರ ದೂರಿನ ಮೇರೆಗೆ ಚಿರತೆ ಪತ್ತೆಗೆ ಮುಂದಾದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹುಡುಕಾಡದ ಸ್ಥಳವಿರಲಿಲ್ಲ. ಎಲ್ಲೇ ಹುಡುಕಿದರೂ ಕೂಡ ಚಿರತೆ ಪತ್ತೆ ಆಗಲೇ ಇಲ್ಲ. ಚಿರತೆ ಹುಡುಕಾಡಲು ಸ್ಥಳೀಯರು ಕೂಡ ಅಧಿಕಾರಿಗಳಿಗೆ ನೆರವಾದರು ಕೂಡ ಚಿರತೆ ಕಣ್ಣಿಗೆ ಕಾಣಿಸಲಿಲ್ಲ. ಆದರೆ ರಾತ್ರಿಯಾದರೆ ಸಾಕು ಚಿರತೆ ಸದ್ದಿಯಲ್ಲದೆ ದಾಳಿ ಮಾಡಿ ಕುರಿ, ಕೋಳಿ, ದನಗಳನ್ನು ಭೇಟೆಯಾಡುತ್ತಿತ್ತು. ಹೀಗಾಗಿ ಚಿರತೆ ಹೆಚ್ಚಾಗಿ ದಾಳಿ ಮಾಡುವ ಸ್ಥಳದಲ್ಲಿ ಪಂಜರವನ್ನು ಇಟ್ಟು ಅದರಲ್ಲಿ ಕೋಳಿ ಹಾಗೂ ಕುರಿ ಮಾಂಸವನ್ನು ಹಾಕಲಾಗಿತ್ತು. ಇದರ ವಾಸನೆಗೂ ಕೂಡ ಚಿರತೆ ಕಾಣಿಸಿಕೊಳ್ಳಲಿಲ್ಲ. ಆದರೆ ಚಿರತೆ ದಾಳಿ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಕಣ್ಣಿಗೆ ಕಾಣದೆ, ಪಂಜರದ ಹತ್ತಿರವೂ ಬಾರದೆ ಚಿರತೆ ಸಿಕ್ಕಾಪಟ್ಟೆ ತೊಂದರೆಯನ್ನುಂಟು ಮಾಡಿತ್ತು. ಹೀಗಾಗಿ ಜನ ನಿದ್ದೆಗೆಟ್ಟು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣ ಮಾಡಿತ್ತು ಚಿರತೆ. ಕೊನೆಗೂ ಬೋನಿಗೆ ಬಿದ್ದ ಚಿರತೆ ಆದರೆ ಸತತ ಆರು ತಿಂಗಳ ಪ್ರಯತ್ನದ ಬಳಿಕ ಚಿರತೆ ಕೊನೆಗೆ ಬೋನಿಗೆ ಬಿದ್ದಿದೆ. ಅಷ್ಟಕ್ಕೂ ಚಿರತೆ ಬಿದ್ದಿದ್ದು ಹೇಗೆ ಅನ್ನೋದನ್ನು ನೀವು ತಿಳಿಯಲೇಬೇಕು. ಚಿರತೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿದೆ. ಅಷ್ಟಕ್ಕೂ ಆ ಪ್ಲ್ಯಾನ್ ಏನು ಗೊತ್ತಾ? ಹನಿಟ್ರ್ಯಾಪ್ ಮಾಡಿ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹೆಣ್ಣು ಚಿರತೆಯ ಆಕರ್ಷಣೆಗೆ ಒಳಗಾಗಿ ಗಂಡು ಚಿರತೆ ಬೋನಿಗೆ ಬಿದ್ದಿದೆ. ಎಷ್ಟೇ ಪ್ರಯತ್ನಪಟ್ಟರೂ ಕೂಡ ಬೋನಿಗೆ ಬೀಳದ ಗಂಡು ಚಿರತೆ ಹೆಣ್ಣು ಚಿರತೆಯ ಆಸೆಯಿಂದ ಬೋನಿಗೆ ಬಿದ್ದಿದೆ. ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಕರವೇ ನಾರಾಯಣಗೌಡ, ಪಕ್ಷ ಯಾವ್ದು ಗೊತ್ತಾ? ಹನಿಟ್ರ್ಯಾಪ್‌ಗೆ ಸಿಕ್ಕಿಬಿದ್ದ ಗಂಡು ಚಿರತೆ ರಾಯಚೂರಿನ ಮಲಯಾಬಾದ್‌ನಲ್ಲಿ ಕಳೆದ ಆರು ತಿಂಗಳಿನಿಂದ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯಲು ಅಧಿಕಾರಿಗಳ ಮಾಸ್ಟರ್ ಪ್ಲ್ಯಾನ್ ವರ್ಕೌಟ್ ಆಗಿದೆ. ಕಮಲಾಪುರ ಪ್ರಾಣಿ ಸಂಗ್ರಹಾಲಯದಿಂದ ಹೆಣ್ಣು ಚಿರತೆಯ ಮಲ ಹಾಗೂ ಮೂತ್ರವನ್ನು ಸಂಗ್ರಹಿಸಿ ಅದನ್ನು ರಾಯಚೂರಿನ ಮಲಯಾಬಾದ್‌ನ ಬೋನಿನಲ್ಲಿ ಇಡಲಾಗಿತ್ತು. ಮೂರು ದಿನಗಳ ನಂತರ ಈ ಗಂಡು ಚಿರತೆ ವಾಸನೆ ಹಿಡಿದು ಬೋನಿಗೆ ಬಂದಿದೆ. ಆಗ ಬೋನಿನಲ್ಲಿ ಸೆರೆಯಾಗಿದೆ ಎಂದು ಅರಣ್ಯಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಆರು ತಿಂಗಳಿನಿಂದ ಜನರಲ್ಲಿ ಆತಂಕ ಹೆಚ್ಚಿಸಿದ್ದ ಚಿರತೆಯನ್ನು ಕೊನೆಗೂ ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದು, ಅವರ ಪ್ಲ್ಯಾನ್‌ಗೆ ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿರತೆ ಸೆರೆ ಹಿಡಿದ ಬಳಿಕ ಜನ ನಿಟ್ಟುಸಿರು ಬಿಟ್ಟಿದ್ದಾರೆ.




