ಗೋಕಾಕ : ಸರಕಾರದಿಂದ ಬಡವರಿಗೆ,ನಿರ್ಗತಿಕರಿಗೆ ನೀಡುವ ಸಂದ್ಯಾ ಸುರಕ್ಷಾ,ವೃದ್ದಾಪ ಪಿಂಚಣಿಯಲ್ಲಿ ದುರುಪಯೋಗ ಆಗಿದೆ ಎಂದು ಗೋಕಾಕ ತಹಸಿಲ್ದಾರ ಮೇಲೆ ಲೊಕಾಯುಕ್ತರು ದಾಳಿ ನಡೆಸಿದ್ದಾರೆ.

ಗೋಕಾಕ ತಹಸಿಲ್ದಾರ ಕಚೇರಿಯಲ್ಲಿ ಪಿಂಚಣಿ ನೀಡುವಲ್ಲಿ ವ್ಯವಹಾರದ ಆಗಿದೆ ಎಂದು ಸ್ಥಳಿಯ ವ್ಯಕ್ತಿ ಒಬ್ಬರು ಅನರ್ಹರಿಗೆ ಪಿಂಚಣಿ ನೀಡಿದ್ದಾರೆಂದು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಲೊಕಾಯುಕ್ತ ಎಸ್, ಪಿ, ಹನುಮಂತರಾಯ ಇವರ ನೇತೃತ್ವದಲ್ಲಿ ಬೆಳ್ಳಂ ಬೆಳಿಗ್ಗೆ 30 ಜನರ ತಂಡದೊಂದಿಗೆ ಗೋಕಾಕದ ತಹಸಿಲ್ದಾರ ಕಚೇರಿ ಸೇರಿದಂತೆ ನಾಲ್ಕು ಜನ ಅಧಿಕಾರಿಗಳ ಮನೆ ಮೇಲೆ ಲೊಕಾಯುಕ್ತರ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಸಿಲಿಸುತಿದ್ದಾರೆ.
ಸುಮಾರು 30 ಜನ ಸಿಬ್ಬಂದಿಗಳ ಜೊತೆಯಲ್ಲಿ ಸೇರಿ ಐದು ತಂಡಗಳಾಗಿ ನಾಲ್ಕು ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಪ್ರಕರಣಕ್ಕೆ ಸಂಬಂದಿಸಿದ ದಾಖಲೆಗಳನ್ನು ಗೋಕಾಕ ತಹಸಿಲ್ದಾರ ಕಚೇರಿಯಲ್ಲಿ ತಹಶೀಲ್ದಾರ್ ಸೇರಿದಂತೆ ವಿವಿಧ ಶಾಖೆಯ ಅಧಿಕಾರಿಗಳ ಜೊತೆ ಕಚೇರಿಯಲ್ಲಿ ತಪಾಸಣೆ ನಡೆಸುತಿದ್ದಾರೆ.
ವರದಿ:ಮನೋಹರ ಮೇಗೇರಿ




